Header Ads
Header Ads
Breaking News

ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ : ಸಿಸಿ ಕ್ಯಾಮರಾಗಳ ಅಳವಡಿಕೆಗೆ ಒತ್ತು ನೀಡುವಂತೆ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಿವಿಧ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಪ್ರತೀ ಠಾಣೆಗಳಲ್ಲೂ ಸಾರ್ವಜನಿಕರಿಗೆ ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಪಡುಬಿದ್ರಿ ಠಾಣೆಯಲ್ಲಿ ಎಎಸೈ ಜಯಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐವತ್ತಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ಬ್ಯಾಂಕ್ ಸಹಿತ ವಿವಿಧ ವ್ಯಾಪಾರ ಕೇಂದ್ರಗಳಲ್ಲಿ ಭದ್ರತೆಯ ದೃಷ್ಠಿಯಿಂದ ಸಿಸಿ ಕ್ಯಾಮಾರಕ್ಕೆ ಹೆಚ್ಚಿನ ಆದ್ಯತೆ ನೀಡ ಬೇಕಾಗಿದೆ. ಹೆಚ್ಚಿನ ಕಡೆ ಸಿಸಿ ಕ್ಯಾಮಾರಗಳಿದ್ದರೂ ಅದರ ನಿರ್ವಾಹಣೆ ಇಲ್ಲದ ಕಾರಣ ಸಂದರ್ಭಕ್ಕೆ ಸರಿಯಾಗಿ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಕೆಲವೊಂದು ಸಿಸಿ ಕ್ಯಾಮಾರಗಳು ತಾಂತ್ರಿಕ ದೋಷದಿಂದ ಕಾರ್ಯಚರಿಸುತ್ತಿಲ್ಲವಾದರೆ, ಕೆಲವೊಂದು ಕ್ಯಾಮಾರಗಳಿಗೆ ಜೇಡರ ಬಲೆ ಅಂಟಿಕೊಂಡಿರುತ್ತೆ, ಹೆಚ್ಚಿನ ಕ್ಯಾಮಾರಗಳು ಸರಿಯಾದ ದಿಕ್ಕಿಗೆ ಮುಖ ಮಾಡದಿರುವುದರಿಂದ ಅವುಗಳು ಇದ್ದೂ ಪ್ರಯೋಜನಕ್ಕೆ ಬರುವುದಿಲ್ಲ, ಪ್ರಮುಖವಾಗಿ ಟೋಲ್‌ಗೇಟ್‌ಗಳ ಕ್ಯಾಮಾರಗಳು ನಿರಂತರವಾಗಿ ಸೇವೆಯಲ್ಲಿದ್ದರೆ ಬಹಳಷ್ಟು ಅಪರಾಧ ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯವೆಂದರು. 

Related posts

Leave a Reply

Your email address will not be published. Required fields are marked *