Breaking News

ಉಡುಪಿ ಜಿಲ್ಲೆಯಲ್ಲಿ 9,100 ಜನರಿಗೆ ಕೌಶಲ್ಯ ತರಬೇತಿ, ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಸ್ಪಷ್ಟನೆ

ಜಿಲ್ಲೆಯಲ್ಲಿ 9,100 ಜನರಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ ತರಬೇತಿಯನ್ನು ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಇದರ ಮೂರು ಪಟ್ಟು ಜನರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕರ್ನಾಟಕ ಕೌಶಲ ಮಿಶನ್ನ ವೆಬ್ ಪೋರ್ಟಲ್ ಮತ್ತು ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಆನ್ಲೈನ್ ನೋಂದಣಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ ಹೆಚ್ಚಾದಷ್ಟೂ ಯುವಜನರ ಯಶಸ್ಸಿನ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಇನ್ನಷ್ಟು ಹೆಚ್ಚಿನ ಗುರಿ ಅಗತ್ಯ ಕಂಡುಬಂದರೆ ಹೆಚ್ಚಿನ ಅವಕಾಶ ಕೊಡಿಸಲು ಮುಖ್ಯಮಂತ್ರಿಗಳ ಬಳಿ ಮಾತನಾಡುವೆ ಎಂದರು. ೮೦೯ ಪರಿಶಿಷ್ಟ ಜಾತಿ, ೪೫೨ ಪರಿಶಿಷ್ಟ ಪಂಗಡ, ೧,೩೦೯ ಅಲ್ಪಸಂಖ್ಯಾಕರು, ಸುಮಾರು ೭,೦೦೦ ಇತರರಿಗೆ ತರಬೇತಿ ನೀಡಲಾಗುವುದು. ಉದ್ಯೋಗ ಅವಕಾಶ ಹೆಚ್ಚಿಸಲು ಪ್ರತ್ಯೇಕ ಇಲಾಖೆಯನ್ನು ಮಾಡಿ ಮುಖ್ಯಮಂತ್ರಿಗಳೇ ಇರಿಸಿಕೊಂಡಿದ್ದಾರೆಂದು ಸಚಿವ ಪ್ರಮೋದ್ ತಿಳಿಸಿದರು. ಯುವಜನ ಸೇವೆ ಇಲಾಖೆಯಿಂದ ಮೇ ೧೯ರಂದು ಉಡುಪಿ ಅಜ್ಜರಕಾಡಿ ನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಮೋದ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ ರಾವ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ೧೮ರಿಂದ ೩೫ ವರ್ಷದೊಳಗಿನ ಉದ್ಯೋಗಾಕಾಂಕ್ಷಿಗಳು ಸೈಬರ್ಕೆಫೆ, ಗ್ರಾ.ಪಂ., ಸ್ವತಃ ಇಂಟರ್ನೆಟ್ ಸೌಲಭ್ಯವಿದ್ದರೆ ಅಲ್ಲಿಂದಲೇ ಅಥವಾ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತರಬೇತಿಗೆ ಹೆಸರು ನೋಂದಾಯಿಸಬಹುದು. ಆಧಾರ್ ಕಾರ್ಡ್ ಇಲ್ಲದಿದ್ದರೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಆಧಾರ್ ಕಾರ್ಡ್ ಮಾಡಿಸಲೂ ವ್ಯವಸ್ಥೆ ಮಾಡಲಾಗಿದೆ. ಇನ್ನು ಹತ್ತು ದಿನ ಆನ್ಲೈನ್ ನೋಂದಣಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

Related posts

Leave a Reply