Header Ads
Header Ads
Breaking News

ಉಡುಪಿ ಜಿಲ್ಲೆಯ 34 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಉಡುಪಿ ಜಿಲ್ಲೆಯಲ್ಲಿ78.82% ಮತದಾನವಾಗಿದೆ. ಜಿಲ್ಲೆಯ 5  ವಿಧಾನಸಭಾ ಕ್ಷೇತ್ರದ 34 ಅಬ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದೆ.

ನಿನ್ನೆ ಮತದಾನ ನಡೆದ ಬಳಿಕ ಆಯಾ ತಾಲೂಕು ಕೇಂದ್ರಗಳಲಲ್ಲಿ ಡಿಮಸ್ಟರಿಂಗ್ ಕಾರ್ಯ ನಡೆದು, ಉಡುಪಿ ವಿಧಾನಸಭಾ ಕ್ಷೇತ್ರದ ಕೆಲವು ಇವಿಎಂ ಯಂತ್ರ ಹಾಗೂ ವಿವಿ ಪ್ಯಾಟ್ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಚಿಸಲಾದ ಸ್ಟ್ರಾಂಗ್ ರೂಮ್ ಗೆ ತರಲಾಗಿದೆ. ಇನ್ನು ಕುಂದಾಪುರ ಹಾಗೂ ಕಾರ್ಕಳದ ಮತಗಟ್ಟೆಗಳ ಮತಯಂತ್ರಗಳನ್ನು ಆಯಾಯ ತಾಲೂಕು ಕೇಂದ್ರದಲ್ಲಿ ಡಿಮಸ್ಟರಿಂಗ್ ಬಳಿಕ ಭದ್ರತೆ ಒದಗಿಸಿ ಇಡಲಾಗಿತ್ತು. ಇಂದು ಮುಂಜಾನೆ ಸ್ಟ್ರಾಂಗ್ ರೂಮ್ ಗೆ ತರಲಾಗಿದ್ದು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೇತ್‌ಋತ್ವದಲ್ಲಿ ಸ್ಟ್ರಾಂಗ್ ರೂಮ್ ನಲ್ಲಿಡುವ ಕಾರ್ಯ ನಡೆಯುತ್ತಿದೆ. ಮಧ್ಯಾಹ್ನದೊಳಗಾಗಿ ಸ್ಟ್ರಾಂಗ್ ರೂಮ್ ಸೇರಿದ ಮತಯಂತ್ರಗಳಿರುವ ಕೊಠಡಿಗೆ ಭದ್ರತೆಗೆ ಒದಗಿಸಿ ಬೀಗ ಮುದ್ರೆ ಒತ್ತಲಾಗುವುದು. ಮೇ15 ರಂದು ತೆರೆಯಲಿರುವ ಸ್ಟ್ರಾಂಗ್ ರೂಮ್ ಅಭ್ಯರ್ಥಿಗಳ ಭವಿಷ್ಯ ಮುಂದಿಡಲಿದೆ.

Related posts

Leave a Reply