Header Ads
Header Ads
Breaking News

ಉಡುಪಿ ಜಿ. ಪಂ. ಸಭೆಯಲ್ಲಿ ಪ್ರತ್ಯೇಕ ಮರಳು ನೀತಿಯ ಕೂಗು, ಶಾಸಕ, ಜಿಪಂ ಪ್ರತಿನಿಧಿಗಳಿಂದ ಸರಕಾರಕ್ಕೆ ಒತ್ತಾಯ


ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಮರಳು ಸಿಗದೇ ಸಮಸ್ಯೆಯಾಗುತ್ತಿದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಜಿಪಂ ಸದಸ್ಯರು ಸಭೆಯಲ್ಲಿ ಆಗ್ರಹಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ದಿನಕರ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಸದಸ್ಯ ಜನಾರ್ದನ್ ತೋನ್ಸೆ ಬಸವ ವಸತಿ ಯೋಜನೆಯಡಿ ಅನೇಕ ಫಲಾನುಭವಿಗಳು ಪಂಚಾಂಗ ಹಾಕಿ ಜಿ.ಪಿ.ಎಸ್. ಮಾಡಿದರೂ ಇನ್ನೂ ಹಣ ಪಾವತಿ ಯಾಗಿಲ್ಲ. ಯೋಜನೆಯಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಿ ಶೀಘ್ರವಾಗಿ ಫಲಾನುಭವಿಗಳಿಗೆ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು. ಜಿಪಂ ಸಮಾನ್ಯ ಸಭೆಯಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ಮಾಡುವ ಕೂಗು ಕೇಳಿ ಬಂತು.
ಬಿಜೆಪಿ ಸದಸ್ಯರೋರ್ವರು ಸರಕಾರಕ್ಕೆ ಇಚ್ಚಾಶಕ್ತಿಯ ಕೊರತೆ ಇದೆ. ಇನ್ನೂ ಕರಾವಳಿಗೆ ಪ್ರತ್ಯೇಕ ನೀತಿ ಜಾರಿಗೆ ಆಗಿಲ್ಲ ಎಂದಾಗ ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ ಸರಕಾರಕ್ಕೆ ಇಚ್ಚಾಶಕ್ತಿಯ ಕೊರತೆ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಪ್ರತ್ಯೇಕ ಮರಳು ನೀತಿ ಜಾರಿಗೆ ಮಾಡುವ ಬಗ್ಗೆ ಹೇಳಿದ್ದಾರೆ. ಆದೇಶವನ್ನೂ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದರೆ. ಅದಕ್ಕೆ ಕರಾವಳಿ ಭಾಗದ ಶಾಸಕರು ಕೈ ಜೋಡಿಸುತ್ತೇವೆ. ಏಕ ರೂಪದ ಮರಳು ನೀತಿನಿಂದ ಇಲ್ಲಿಯ ಕಾರ್ಮಿಕರಿಗೆ ಭಾರೀ ತೊಂದರೆಯಾಗಲಿರುವ ಕಾರಣಕ್ಕಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ನೀತಿ ಜಾರಿಗೆಗೆ ಆಗ್ರಹ ಮiಡುತ್ತಿದ್ದೇವೆ ಆದ್ದರಿಂದ ಸರ್‌ಕಾರ ಕೂಡಾ ನಮ್ಮ ದ್ವನಿಗೆ ಸ್ಪಂದಿಸಲಿದೆ ಎಂದರು.

Related posts

Leave a Reply