Header Ads
Header Ads
Breaking News

ಉಡುಪಿ ಜಿ.ಪಂ ಸಾಮಾನ್ಯ ಸಭೆ:ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ,ತನಿಖೆ ನಡೆಸಲು ನಿರ್ಣಯ ಕೈಗೊಂಡ ಜಿ.ಪಂ

ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ 4 ವರ್ಷಗಳ ಹಿಂದೆ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಉಡುಪಿ ಜಿಲ್ಲಾ ಪಂಚಾಯತ್ ನಿರ್ಣಯ ಕೈಗೊಂಡಿದೆ.ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯಸಭೆಯಲ್ಲಿ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ ಅವರು ವಿಷಯ ಪ್ರಸ್ತಾವಿಸಿ, “ಕಾಮಗಾರಿ ಕಳಪೆಯಾಗಿದೆ. ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಜನಾರ್ದನ ತೋನ್ಸೆ ಅವರು “ಈ ಬಗ್ಗೆ ಲೋಕಾಯುಕ್ತ ಅಥವಾ ಜಿ.ಪಂ. ಸದನ ಸಮಿತಿಯಿಂದ ತನಿಖೆಯಾಗಲಿ’ ಎಂದರು. ಪ್ರತಿಕ್ರಿಯಿಸಿದ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ “ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಲು ಸಾಧ್ಯವಿಲ್ಲ. ಅಧ್ಯಕ್ಷರ ನೇತೃತ್ವದಲ್ಲಿ ತನಿಖೆ ನಡೆಸಬಹುದು’ ಎಂದರು.ಹೆಜಮಾಡಿಯಲ್ಲಿ ಅಳಿವೆ ಇಲ್ಲದ ಜಾಗದಲ್ಲಿ 84 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡ ಲಾಗಿದೆ. ಇದು ನಿಷ್ಪ್ರಯೋಜಕವಾಗಿದೆ ಎಂದು ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ದೂರಿದರು. ಜಿಲ್ಲೆಯಲ್ಲಿ 59 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕೆಲವು ಘಟಕಗಳು ನಿಷ್ಪ್ರಯೋಜಕವಾಗಿವೆ ಎಂದು ತೋನ್ಸೆ ಹೇಳಿದರು.

“ಕೆಲವು ಕಡೆ ಪಿಡಿಒಗಳು 6-7 ವರ್ಷಗಳಿಂದ ಇದ್ದಾರೆ. ಇಂತಹ ಗ್ರಾ.ಪಂ.ಗಳಲ್ಲೇ ಹೆಚ್ಚು ಗುಂಪು ಗಾರಿಕೆ ನಡೆಯುತ್ತಿದೆ. 3 ವರ್ಷಗಳಿಗಿಂತ ಹೆಚ್ಚು ಸಮಯ ಒಂದೇ ಕಡೆ ಇರುವ ಪಿಡಿಒ ಗಳನ್ನು ವರ್ಗಾಯಿಸಿದರೆ ಸಮಸ್ಯೆಗಳು ಸ್ವಲ್ಪವಾದರೂ ಪರಿಹಾರವಾದೀತು’ ಎಂದು ಸುಮಿತ್ ಶೆಟ್ಟಿ ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದರು.

Related posts

Leave a Reply

Your email address will not be published. Required fields are marked *