Header Ads
Header Ads
Breaking News

ಉಡುಪಿ : ಜುಲೈ 13ರಂದು ಕ್ರೈಸ್ತರಿಗಾಗಿ ಜನಸ್ಪಂದನಾ ಕಾರ್ಯಕ್ರಮ

ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮವನ್ನು ಜುಲೈ ೧೩ರಂದು ಉಡುಪಿಯ ಮಿಶನ್ ಕಂಪೌಂಡ್ ಬಳಿಯ ಸಿ.ಎಸ್.ಐ ಬಾಯ್ಸ್ ಬೋಡಿಂಗ್ ಹೋಮ್‌ನಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಐಸಿಯುನ ಸಹ ಕಾರ್ಯದರ್ಶಿ ಸ್ಟೀವನ್ ಕುಲಾಸೋ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಉಪಸ್ಥಿತಿಯಲ್ಲಿ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಕ್ರೈಸ್ತ ಸಮಾಜದ ಬಾಂಧವರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ಇಲಾಖಾ ಯೋಜನೆಗಳ ಸೂಕ್ತ ಮಾಹಿತಿ, ಶಾಸಕರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸ್ಥಳದಲ್ಲಿ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನ ನೀಡಲಾಗುವುದು ಅದೇ ರೀತಿ ಚಿಕಿತ್ಸಾ ವೆಚ್ಚಕ್ಕೆ ಅರ್ಹರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಾಹಾಯ ಪಡೆಯಬಹುದಾಗಿದೆ ಎಂದರು

Related posts

Leave a Reply

Your email address will not be published. Required fields are marked *