Header Ads
Header Ads
Breaking News

ಉಡುಪಿ : ಡಿ.18ರಂದು ಕೇಬಲ್ ಆಪರೇಟರ್ಸ್‌ಗಳಿಂದ ಪ್ರತಿಭಟನೆ

ಕೇಂದ್ರ ಸರಕಾರ ಕೇಬಲ್ ಆಪರೇಟರ್ಸ್‌ಗಳ ಮೇಲೆ ಗದಾ ಪ್ರಹಾರ ನಡೆಸಿದೆ. ಟ್ರಾಯ್‌ನ ಹೊಸ ಕಾನೂನು ಜಾರಿಗೆ ಆದ್ರೆ ಕೇಬಲ್ ಆಪರೇಟರ್‌ಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರಕಾರದ ನೂತನ ನೀತಿಯ ವಿರುದ್ದ ಡಿಸೆಂಬರ್ 18ರಂದು ಉಡುಪಿ ರಜತಾದ್ರಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.

ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಕೇಬಲ್‌ನ ಮೂಲಕ ಗ್ರಾಹಕರಿಗೆ 250ರಿಂದ 300 ರೂ ಒಳಗೆ 200ಕ್ಕೂ ಹೆಚ್ಚು ಚಾನೆಲ್‌ಗಳು ಲಭ್ಯವಾಗುತ್ತಿದೆ. ಆದ್ರೆ ಇದೀಗ ಕೇಂದ್ರ ಸರಕಾರದ ಅಧೀನದ ಟೆಲಿಕಾಂ ರೆಗ್ಯುಲೆಟರಿ ಅಥೋರಿಟಿ ಆಫ್ ಇಂಡಿಯಾ ನೂತನ ನೀತಿಯನ್ನು ಜಾರಿಗೆಗೊಳಿಸಲಿದ್ದು 130ರಿಂದ 150 ರೂ ತನಕ ಪ್ರೀ ಚಾನೆಲ್ ಗೋಸ್ಕರ ಗ್ರಾಹಕರು ದುಡ್ಡು ಕಟ್ಟಬೇಕಾಗಿದೆ. ಮಾತ್ರವಲ್ಲದೇ ಮನೋರಂಜನಾ ಹಾಗೂ ಕ್ರೀಡೆಗೆ ಸಂಬಂಧಿತ ಚಾನೆಲ್‌ಗಳಿಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಲಾಗಿದ್ದು ಪ್ರತೀ ಚಾನೆಲ್ ಹೊಂದಬೇಕಾದರೆ 500ರಿಂದ 1000 ಸಾವಿರ ತನಕ ಗ್ರಾಹಕರು ದುಡ್ಡು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೇಬಲ್ ಆಪರೇಟರ್‌ಗಳು ಯಾವುದೇ ಫ್ರೀ ಚಾನೆಲ್‌ಗಳಿಗೆ ಗ್ರಾಹಕರ ಮೇಲೆ ಹೊರೆ ಹಾಕಿಲ್ಲ. ಆದ್ರೆ ಹೊಸ ನೀತಿಯಿಂದಾಗಿ ಗ್ರಾಹಕರು ಹೆಚ್ಚುವರಿ ಹಣವನ್ನು ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀತಿಯನ್ನ ವಿರೋಧಿಸಿ ಕೇಬಲ್ ಆಪರೇಟರ್ಸ್‌ಗಳ ಸಂಘದಿಂದ ಡಿಸೆಂಬರ್ 18ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

Related posts

Leave a Reply