Header Ads
Breaking News

ಉಡುಪಿ ನಗರದಲ್ಲಿ ಹರಿಯುತ್ತಿದೆ ಡ್ರೈನೇಜ್ ನೀರು; ಮಾರಕ ರೋಗಗಳಿಗೆ ಆಹ್ವಾನ, ಬಾವಿ ನೀರು ಕಲುಷಿತ

ಉಡುಪಿಯ ನಗರ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಡ್ರೈನೇಜ್ ನೀರು ತೋಡಿನಲ್ಲಿ ಹರಿಯುತ್ತಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ ಮಾತ್ರವಲ್ಲದೇ ಇಂದ್ರಾಣಿ ನದಿ ಕಲುಷಿತವಾಗಲು ಕಾರಣವಾಗುತ್ತಿದೆ.

ಉಡುಪಿಯ ನಗರದ ವಿದ್ಯಾ ಸಮುದ್ರ ಮಾರ್ಗ ದ ಬಳಿ ಇದೀಗ ಡ್ರೈನೇಜ್ ನೀರು ತಾಂಡವಾಡುತ್ತಿದೆ. ಗೀತಾಂಜಲಿ ಹಾಗೂ ಅಮ್ಮುಂಜೆ ಪೆಟ್ರೋಲ್ ಪಂಪ್ ಎದುರಿನಲ್ಲಿರುವ ತೋಡಿನಲ್ಲಿ ಡ್ರೈನೇಜ್ ನೀರು ಹರಿಯುತ್ತಿದ್ದು ಇಡೀ ಪ್ರದೇಶವೇ ದುರ್ವಾಸನೆಯಿಂದ ಕೂಡಿದೆ. ವಾರಗಳ ಹಿಂದೆ ಸ್ವತ: ಜಿಲ್ಲಾಧಿಕಾರಿಗಳೇ ಈ ಪ್ರದೇಶಕ್ಕೆ ಬಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರಸಭಾ ಆಯುಕ್ತರಿಗೆ ತಿಳಿಸಿದ್ದರು. 4 ದಿನಗಳ ಕಾಲ ಈ ತೋಡಿನಲ್ಲಿ ಡ್ರೈನೇಜ್ ಹರಿಯುವುದು ಕೂಡಾ ನಿಂತಿತ್ತು. ಆದ್ರೆ ಈ ಗ ಮತ್ತೆ ಡ್ರೈನೇಜ್ ನೀರು ಹರಿಯಲು ಆರಂಭವಾಗಿದೆ.

ವಾಯ್ಸ್: ಈ ತೋಡಿನಲ್ಲಿ ಡ್ರೈನೇಜ್ ನೀರು ಹರಿಯುವ ಕಾರಣ ಬೇಸಿಗೆಯಲ್ಲಿ ನಗರಕ್ಕೆ ಜನರಿಗೆ ನೀರನ್ನು ಪೂರೈಕೆ ಮಾಡುವ ಬಾವಿ ಕೂಡಾ ಹಾಳಾಗಿದ್ದು ಸ್ನಾನ ಮಾಡಲೂ ಸಹ ಈ ನೀರನ್ನು ಉಪಯೋಗಿಸದ ಪರಿಸ್ಥಿತಿ ಇದೆ. ಮನೆಯವರು ಬೇರೆ ಕಡೆಯಿಂದ ನೀರು ತಂದು ಬಳಕೆ ಮಾಡುತ್ತಿದ್ದಾರೆ. ಪರ್ಯಾಯ ಮಹೋತ್ಸವ ಹತ್ತಿರ ಬರುತ್ತಿರುವ ಸಂದರ್ಬದಲ್ಲಿ ಈ ರೀತಿಯಾಗಿ ಡ್ರೈನೇಜ್ ನೀರು ಹರಿಯುತ್ತಿರುವುದು ನಗರಕ್ಕೆ ಕಳಂಕ ತರುತ್ತಿದೆ. ಪರಿಸರದ ಹಲವಾರು ಬಾವಿಗಳು ಹಾಳಾಗಿದೆ. ಅನೇಕ ರೋಗಗಳು ಈ ಡ್ರೈನೇಜ್ ನೀರು ಆಹ್ವಾನಿಸುತ್ತಿದೆ. ಆದಷ್ಟು ಬೇಗ ಈ ಡ್ರೈನೇಜ್ ನಿಂದ ಮುಕ್ತಿ ಕೊಡಬೇಕೆಂದು ನಾಗರೀಕ ಸಮಿತಿ ಆಗ್ರಹಿಸಿದೆ.

ವಾಯ್ಸ್: ಉಡುಪಿಯ ಪ್ರಮುಖ ಹೊಟೇಲ್ ಹಾಗೂ ವಸತಿ ಸಂಕೀರ್ಣಗಳು ನೇರವಾಗಿ ನೀರನ್ನು ಹರಿಯಬಿಡುತ್ತಿದ್ದು ಇದು ಈ ತೋಡಿನ ಮೂಲಕ ಇಂದ್ರಾಣಿ ನದಿ ಸೇರುತ್ತಿದೆ. ಈ ಮೂಲಕ ಉಡುಪಿಯ ಇಂದ್ರಾಣಿ ನದಿಯೂ ಹಾಳಾಗಲು ಕಾರಣವಾಗಿದೆ. ಈ ರೀತಿಯಾಗಿ ಬೇಕಾಬಿಟ್ಟಿ ನೀರು ಹರಿಯಲು ಕಾರಣವಾದ ಹೊಟೇಲ್ ಹಾಗೂ ವಸತಿ ಸಂಕೀರ್ನಗಳ ಮೇಲೆ ಇನ್ನಾದರೂ ನಗರಸಭೆಯ ಆಯುಕ್ತರು ಕ್ರಮ ಕೈಗೊಳ್ಳಬೇಕಾಗಿದೆ.

Related posts

Leave a Reply

Your email address will not be published. Required fields are marked *