Header Ads
Header Ads
Header Ads
Breaking News

ಉಡುಪಿ ನಗರಸಭೆಯ ಸಾಮಾನ್ಯ ಸಭೆ ಇಂದಿರಾ ಕ್ಯಾಂಟೀನ್ ಜಾಗದ ವಿಚಾರ ಚರ್ಚೆ ನಗರಸಭೆಯ ಅನುಮತಿ ಪಡೆದಿದಕ್ಕೆ ವಿಪಕ್ಷ ಆಕ್ಷೇಪ

 

ಉಡುಪಿ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಬಗೆಗೆ ಚರ್ಚೆ ನಡೆದಿದೆ. ಉಡುಪಿಯಲ್ಲಿ ಎರಡು ಕಡೆ ಇಂದಿರಾ ಕ್ಯಾಂಟೀನ್ ತೆರೆಯಲು ಈಗಾಗಲೇ ಸಿದ್ದತೆ ನಡೆದಿದ್ದು ಆದ್ರೆ ಜಾಗದ ವಿಚಾರದಲ್ಲಿ ನಗರಸಭೆಯಲ್ಲಿ ಚರ್ಚೆ ನಡೆಯಿತು.ನಗರಸಭೆಯ ಅದ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ ಸಮಾನ್ಯಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಯಶಪಾಲ್ ಸುವರ್ಣ ನಗರಸಭೆಯ ಅನುಮತಿ ಪಡೆದು ಜಾಗ ಗುರುತಿಸಲಾಗಿದೆಯಾ ಪ್ರಶ್ನಿಸಿದರು.

ಬೋರ್ಡ್ ಹೈಸ್ಕೂಲ್ ನಳಿ ಇಂದೀರಾ ಕ್ಯಾಂಟೀನ್ ನಡೆಸುವುದಕ್ಕೆ ನಗರಸಭೆಯ ಸದಸ್ಯರ ಗಮನಕ್ಕೆ ತರಲಾಗಿಲ್ಲ. ಸಭೆಯ ಅನುಮತಿಪಡೆಯದೇ ಇಂದೀರಾ ಕ್ಯಾಂಟೀನ್ ತುರಾತುರಿಯಲ್ಲಿ ಆರಂಭಿಸಲು ಸಿದ್ದತೆ ನಡೆಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ನಗರಸಭೆಯ ಪೌರಾಯುಕ್ತ ಡಿ ಮಂಜುನಾಥಯ್ಯ ಮಾತನಾಡಿ ಈಗಾಗಲೇ ಜಾಗದ ಬಗ್ಗೆ ಯಾವುದೇ ವಿವಾದ ಇಲ್ಲ. ಡಿಸಿಯವರೇ ಜಾಗ ಗುರುತಿಸಿ ಅಂತಿಮ ಮಾಡಿದ್ದಾರೆ. ಅದು ಕೂಡಾ ಸರಕಾರಿ ಜಾಗವಾಗಿದೆ. ನಗರಸಭೆಯ ಅನುಮತಿ ಬೇಕಿಲ್ಲ ಎಂದರು. ಈ ಸಂದರ್ಭದಲ್ಲೇ ಅನಧಿಕೃತ ಗೂಡಂಗಡಿಯ ಬಗೆಗೂ ಚರ್ಚೆ ನಡೆಯಿತು. ನಗರಸಭೆಯ ವ್ಯಾಪ್ತಿಯಲ್ಲಿ ನೀರಿನ ಕೊರತೆ ಮತ್ತು ಅಸಮರ್ಪಕ ಪೂರೈಕೆಯ ಬಗೆಗೂ ಹಲವಾರು ಸದಸ್ಯರು ದ್ವನಿ ಎತ್ತಿದರು.

Related posts

Leave a Reply