Header Ads
Header Ads
Breaking News

ಉಡುಪಿ ನಗರಸಭೆಯ ಹಿಂಭಾಗ ಹರಡುತ್ತಿದೆ ಗಬ್ಬುವಾಸನೆ : ತೆರೆದ ತೋಡಿಗೆ ಹರಿಯುತ್ತಿದೆ ಕಛೇರಿ ಶೌಚಾಲಯದ ತ್ಯಾಜ್ಯದ ನೀರು..!

ನಗರಸಭೆ ಕಛೇರಿ ಒಳಭಾಗದಲ್ಲಿರುವ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಯೋಗಿಸುವ ಶೌಚಾಲಯದಿಂದ ಶೌಚತ್ಯಾಜ್ಯವು ಚೆಂಬರು ಒಡೆದು, ನಗರಸಭೆ ಹಿಂಭಾಗದಲ್ಲಿರುವ ತೆರೆದ ತೋಡಿನಲ್ಲಿ ಹರಿಯುತ್ತಿದೆ. ಪರಿಸರದಲ್ಲಿ ಹಲವಾರು ದಿನಗಳಿಂದ ಗಬ್ಬುವಾಸನೆ ಹೊಡೆಯುತ್ತೀದೆ. ಮಾರಕ ಸೊಳ್ಳೆಗಳು ಆಶ್ರಯಿಸಿಕೊಂಡಿವೆ. ನಗರಕೇಂದ ವಾಚಾನಾಲಯದ ಪಕ್ಕದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯಾರ್ಥಿಗಳು, ಭಕ್ತರು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಇಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪರಿಸರದಲ್ಲಿ ಡೆಂಗ್ಯೂ, ಮಲೇರಿಯಾ ಮಾರಕ ಸಾಂಕ್ರಮಿಕ ರೋಗಗಳು ಹರಡುವ ಭೀತಿಯು ಎದುರಾಗಿದೆ. ಸಾರ್ವಜನಿಕರು ಸಂಬಂಧಪಟ್ಟವರಿಗೆ ಮೌಖಿಕವಾಗಿ ದೂರು ನೀಡಿದರೂ ಇದುವರೆಗೆ ಕಾಳಜಿ ವಹಿಸಿಲ್ಲ ಎಂದು ತಿಳಿದು ಬಂದಿದೆ. ಮೇಲಾಧಿಕಾರಿಗಳಾದರೂ ಸಾರ್ವಜನಿಕರ ಅಳಲಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *