Header Ads
Header Ads
Header Ads
Breaking News

ಉಡುಪಿ ನಗರಸಭೆಯ 2018-19 ನೇ ಸಾಲಿನ ಆಯವ್ಯಯ ಮಂಡನೆ ಒಟ್ಟು 190 ಲಕ್ಷದ ಮಿಗತೆ ಬಜೆಟ್‌ನ್ನು ಮಂಡನೆ

ಉಡುಪಿ ನಗರಸಭೆಯ 2018-19 ನೇ ಸಾಲಿನ ಆಯವ್ಯಯವನ್ನು ನಗರ ಸಭೆ ಅಧ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ ಮಂಡಿಸಿದರು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒಟ್ಟು 190 ಲಕ್ಷದ ಮಿಗತೆ ಬಜೆಟ್‌ನ್ನು ಮಂಡಿಸಿದ ಅಧ್ಯಕ್ಷರು ಸ್ವಚ್ಚತೆ ಮತ್ತು ನೈರ್ಮಲ್ಯಕ್ಕೆ ಘನ ತಾಜ್ಯ ನಿರ್ವಹಣೆಗೆ ಹೆಚ್ಚಿನ ಅನುದಾನವನ್ನು ಕಾದಿರಿಸಿದರು. ನಗರ ಸಭೆ ಕಟ್ಟಡ ಳಾಂತರಕ್ಕೆ 16 ಕೋಟಿ ಅಂದಾಜಿಸಲಾಗಿದ್ದು ಹಾಲಿ ಇರುವ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಬಜೆಟ್ ನ ಚರ್ಚೆಯಲ್ಲಿ ಮಾತನಾಡಿದ ವೊ‌ಇರೋಧ ಪಕ್ಷದ ನಾಯಕ ಡಾ. ಎಮ್ ಆರ್ ಪೈ ಕಾಗದ ರಹಿತ ಆಡಳಿತದ ಕ್ರಮ ಹಾಗೂ ಸೋಡಿಯಂ ಬಲ್ಬ್ ಗಳ ಬದಳಾಗಿ ಎಲ್ ಇಡಿ ಬಲ್ಪಗಳನ್ನು ಅಳವಡಿಸುವುದಕ್ಕೆ ಮೆಚ್ಚುಗೆ ವ್ಯಕ್ತಹಪಡಿಸಿದರು. ಆದರೆ ಪ್ರಸ್ತುತ ಉಡುಪಿ ನಗರಕ್ಕೆ ನಿರಿಂತರ ಕುಡಿಯುವ ನೀರನದ್ನು ಒದಗಿಸಲು ವಾರಾಹಿ ಯಿಂದ ನೀರು ತರಲು ಅನೇಕ ಅಡೆ ತಡೆಗಳಿವೆ. ಆದರೂ ಬಜೆಟ್ ನಲ್ಲಿ ಈ ಬಗ್ಗೆ ತುಂಬಾ ನಿರೀಕ್ಷಯನ್ನೆ ಇಟ್ಟುಕೊಂಡಿರುವುದು ಸರಿಯಲ್ಲ ಎಂದರು. ಇದಕ್ಕೆಡ ಉತ್ತರಿಸಿದ ಪೌರಾಯುಕ್ತರು ವಾರಾಹಿ ಯೋಜನರಗರೆ ಇರುವ ಎಲ್ಲಾ‌ಅಡೆ ತಡೆಗಳು ನೀವಾರಣೆಯಾಗಿದೆ ರಾಜ್ಯ ಸರ್ಕಾರದ ಅನುಮೋದನೆಗೆ ಮಾತ್ರ ಬಾಕಿ ಇದೆ. ನಮಗೆ ಅವಶ್ಯ ಇರುವ ನಾಲ್ಕು ತಿಂಗಳಿಗೆ ಬಾರಾಹಿ ಯಿಂದ ಖಂಡಿತ ನೀರು ತರಲಾಗುವುದು ಎಂದರು.

Related posts

Leave a Reply