Header Ads
Breaking News

ಉಡುಪಿ : ನಾಗರಿಕ ಸಮಿತಿಯಿಂದ ಅಗ್ನಿಶಾಮಕದಳಕ್ಕೆ ಪಂಪ್‌ಸೆಟ್‌ನ ಕೊಡುಗೆ

ಉಡುಪಿಯಾದ್ಯಂತ ನೀರಿನ ಸಮಸ್ಯೆ ತಲೆದೋರಿದೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಅಗ್ನಿ ಶಾಮಕದಳಕ್ಕೂ ಸಾಕಷ್ಟು ನೀರಿನ ವ್ಯವಸ್ಥೆಗಳು ಬೇಕಾಗುತ್ತದೆ. ಅಗ್ನಿ ಶಾಮಕದಳ ಬಾವಿಯಲ್ಲಿ ನೀರಿದ್ದರೂ ಅ ನೀರನ್ನು ಲಿಪ್ಟ್ ಮಾಡಲು ಪಂಪ್ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಜಿಲ್ಲಾ ನಾಗರೀಕ ಸಮಿತಿಗೆ ಅಗ್ನಿ ಶಾಮಕ ದಳದ ಅಧಿಕಾರಿಗಳು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಮಿತಿಯ ಪ್ರ. ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಲೋಕೋಪಯೋಗಿ ಇಲಾಖೆ ಉಡುಪಿಯ ಸಹಕಾರದೊಂದಿಗೆ ನೀರೆತ್ತುವ ಪಂಪ್‌ಸೆಟ್ ವ್ಯವಸ್ಥೆ ಮಾಡಿದ್ದಾರೆ. ಇಂದು ನಾಗರೀಕ ಸಮಿತಿ, ಲೋಕೋಪಯೋಗಿ ಇಲಾಖೆ ವತಿಯಿಂದ ಕೊಡುಗೆಯಾಗಿ ನೀಡಲಾದ ನೀರೆತ್ತುವ ಪಂಪ್ ಉದ್ಘಾಟಿಸುವ ಕಾರ್ಯಕ್ರಮ ಅಜ್ಜರಕಾಡಿನ ಅಗ್ನಿಶಾಮಕ ದಳದ ಆವರಣದಲ್ಲಿ ನಡೆಯಿತು.

ಸಮಾಜ ಸೇವಕ, ಉದ್ಯಮಿ ಕೃಷ್ಣ ಮೂರ್ತಿ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಅಗ್ನಿ ಶಾಮಕದ ದಳದ ಬೇಡಿಕೆಗೆ ನಾಗರೀಕ ಸಮಿತಿ ಈ ಹಿಂದೆಯೂ ಸ್ಪಂದಿಸುತ್ತಾ ಬಂದಿದೆ. ಅಗ್ನಿಶಾಮಕ ದಳ ಕೆಲವೊಂದು ಬೇಡಿಕೆ ಇಡೇರಿಸುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸುವ ಭರವಸೆ ನೀಡಿದರು. ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಮಾತನಾಡಿ ಅಗ್ನಿಶಾಮಕದ ದಳಕ್ಕೆ ತುರ್ತು ಕೆಲಸಕ್ಕೆ ನೀರು ಬೇಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಕಾರ ಪಡೆದು ಪಂಪ್ ಸೆಟ್ ಒದಗಿಸಿದ್ದೇವೆ. ಮುಂದೆಯೂ ಯಾವುದಾದರೂ ಅಗತ್ಯ ನೆರವು ಬೇಕಿದ್ದರೆ ಒದಗಿಸಲು ನಾಗರೀಕ ಸಮಿತಿ ಸಿದ್ದವಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಎಚ್.ಎಂ ವಸಂತ್ ಕುಮಾರ್, ಸ್ಟೇಶನ್ ಆಫೀಸರ್ ಪಿ.ಗೋಪಾಲ್, ಮುಖ್ಯ ಅಗ್ನಿಶಾಮಕಾಧಿಕಾರಿ ಎ.ಎಲ್.ನಾಯ್ಕ್, ನಿಜಗುಣ, ಸೂರ್ಯ ಪ್ರಕಾಶ್ , ಅಗ್ನಿಶಾಮಕದ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *