Header Ads
Header Ads
Header Ads
Breaking News

ಉಡುಪಿ ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆ : ಗಣ್ಯಾತಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡೋದ್ರಿಂದ ಶ್ರೀಗಳ ಚಿಕಿತ್ಸೆಗೆ ಅಡ್ಡಿ

ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬೆಂಗಳೂರು ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ, ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ, ಪುತ್ತಿಗೆ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿದ್ದಾರೆ. ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ,. ಶ್ರೀಗಳ ಆರೋಗ್ಯ ವಿಚಾರಣೆಗೆ ಗಣ್ಯಾತಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಗಣ್ಯರ ಭೇಟಿಯಿಂದ ಚಿಕಿತ್ಸೆಗೆ ಅಡ್ಡಿಯಾಗೋದ್ರಿಂದ ಇಂದಿನಿಂದ ಪೇಜಾವರ ಶ್ರೀಗಳ ಭೇಟಿ ಮಾಡಲು ನಿರ್ಬಂಧ ಹೇರಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ಇನ್ನು ಶ್ರೀಗಳ ದರ್ಶನ ಮಾಡಿ ಬಂದ ಸಂಸದ ತೇಜಸ್ವಿ ಸೂರ್ಯ ಅವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಪೇಜಾವರ ಶ್ರೀಗಳು ಸದ್ಯ ಟ್ರೀಟ್‌ಮೆಂಟ್‌ನಲ್ಲಿದ್ದಾರೆ. ಅವರು ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ. ಅವರದ್ದು ಮಗುವಿನಂತಹಾ ಮುಗ್ಧತೆ, ಅವರು ಅದಮ್ಯ ಚೈತನ್ಯ. ಸ್ವಾಮೀಜಿ ಮತ್ತ? ಧರ್ಮದ ಕೆಲಸ ಮಾಡುವಂತಾಗಲಿ. ಅವರು ಗುಣಮುಖರಾಗುವ ನಂಬಿಕೆ ಮೂಡಿದೆ ಎಂದು ಹೇಳಿದ್ರು.

ಇನ್ನು ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಪೇಜಾವರ ಶ್ರೀಗಳು ಯಾವತ್ತೂ ಆಕ್ಟಿವ್ ಆಗಿರುವವರು. ಅವರು ಯಾವತ್ತೂ ಹಾಸಿಗೆ ಹಿಡಿದವರಲ್ಲ. ಸ್ವಾಮೀಜಿ ಆದ? ಬೇಗ ಚೇತರಿಸುವಂತಾಗಲಿ. ಶ್ರೀಗಳು ಎಲ್ಲಾ ಧರ್ಮ, ಜಾತಿಗೆ ಬೇಕಾದವರು. ತುಳಿತಕ್ಕೆ ಒಳಗಾದವರ ಪರ ಚಿಂತನೆ ಇರುವ ಸ್ವಾಮೀಜಿ. ಆದ? ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಲಿ. ಅವರು ರಾಮಮಂದಿರ ನೋಡುವಂತಾಗಲಿ ಎಂದು ಹೇಳಿದ್ರು.

ಇನ್ನು ಪುತ್ತಿಗೆ ಶ್ರೀಯವರ ಮಾತನಾಡಿ, ಪೇಜಾವರ ಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಉಸಿರಾಟ ನಡೆಯುತ್ತಿರುವುದನ್ನು ನಾನು ಕಂಡೆ. ಎಂಆರ್‌ಐ ರಿಪೋರ್ಟ್‌ಗೆ ಎಲ್ಲರೂ ಕಾಯುತ್ತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಿದೆ. ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ. ದೇಶಾದ್ಯಂತ ಪೇಜಾವರಶ್ರೀ ಆರೋಗ್ಯ ವೃದ್ಧಿಗೆ ಪೂಜೆಗಳಾಗುತ್ತಿದೆ ಎಂದು ಹೇಳಿದ್ರು. ಒಟ್ಟಿನಲ್ಲಿ ಶ್ರೀಗಳ ಆರೋಗ್ಯದಲ್ಲಿ ಚೇರಿಕೆ ಕಂಡು ಅವರು ಗುಣಮುಖರಾಗಲಿ ಅನ್ನೋದೇ ನಮ್ಮೆಲ್ಲರ ಆಶಯ.

Related posts

Leave a Reply

Your email address will not be published. Required fields are marked *