Header Ads
Breaking News

ಉಡುಪಿ : “ಪ್ಲಾಸ್ಟಿಕ್ ತ್ಯಜಿಸಿ- ಪರಿಸರ ಉಳಿಸಿ” ಅಭಿಯಾನ

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ಜಂಟಿ ಆಯೋಜನೆಯಲ್ಲಿ “ಪ್ಲಾಸ್ಟಿಕ್ ತ್ಯಜಿಸಿ- ಪರಿಸರ” ಉಳಿಸಿ ಅಭಿಯಾನ ನಡೆಯುತ್ತಿದೆ. ಕುಟುಂಬವೊಂದಕ್ಕೆ ಪರಿಸರ ಸ್ನೇಹಿ ಬಹುಕಾಲ ಬಳಕೆಗೆ ಬರಬಹುದಾದ ಬಟ್ಟೆಚೀಲವನ್ನು ಉಚಿತವಾಗಿ ವಿತರಿಸುವ ಯೋಜನೆ ರೂಪಿಸಿದ್ದಾರೆ.

ಉಡುಪಿಯ ಅಲೆವೂರು ವಾರದ ಸಂತೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಲ್ಲಿ ಗ್ರಾಹಕರಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಾಪಸುಪಡೆದು ಬಟ್ಟೆಚೀಲಗಳನ್ನು ಉಚಿತ ವಿತರಿಸಿದ್ದರು. ಶ್ರೀಸಾಯಿರಾಂ ಟೆಕ್ಸ್ ಟೈಲ್ಸ್ ಬಟ್ಟೆ ಮಳಿಗೆಯ ಮಾಲಿಕರು ಚೀಲ ಸಿದ್ದಗೊಳಿಸಲು ಉತ್ತಮ ಗುಣಮಟ್ಟದ ಬಟ್ಟೆಯನ್ನು ಉಚಿತವಾಗಿ ನೀಡಿದ್ದಾರೆ ಎಂದು ಜಂಟಿ ಸಂಘಟಕರಲ್ಲಿ ಒರ್ವರಾದ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *