Header Ads
Breaking News

ಉಡುಪಿ: ಬಸ್‌ಸ್ಟ್ಯಾಂಡ್ ನಿರ್ಮಾಣ ಹೆಸರಲ್ಲಿ ಮರಗಳ ಮಾರಣಹೋಮ

ಉಡುಪಿಯಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಬೃಹತ್ ಮರಗಳು ಧರೆಗೆ ಉರುಳುತ್ತಿದ್ದು ಪರಿಸರವಾದಿಗಳು ಏನೂ ಮಾಡಲಾಗದೇ ಕಣ್ಣೀರು ಹಾಕುತ್ತಿದ್ದಾರೆ. ಇದು ಉಡುಪಿಯ ಬನ್ನಂಜೆ ಪರಿಸರ. ಈ ಪರಿಸರದಲ್ಲಿ 100ಕೂ ಹೆಚ್ಚು ವರ್ಷಗಳ, ಹಚ್ಚ ಹಸಿರಾಗಿ ಬೃಹತಾಗಿ ಬೆಳೆದಿರುವ ಮರಳಿವೆ. ಪರಿಸರಕ್ಕೆ ಹಾನಿಯಾದ್ರೆ ಏನು ಆಗಬಹುದು ಎಂಬುದನ್ನ ಈಗಾಗಲೇ ಎಲ್ಲಾ ಕಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ತೋರಿಬರುತ್ತಿದೆ. ಆದ್ರೆ ಇನ್ನೂ ಸರಕಾರ ಇದರ ಬಗ್ಗೆ ಎಚ್ಚೆತ್ತುಕೊಂಡಂತಿಲ್ಲ. ಅಭಿವೃದ್ದಿ ಮಾಡಬೇಕು ಆಮೂಲಕ ಕಮಿಷನ್ ಹಣವನ್ನು ಬೇಬಿಗೆ ಇಳಿಸಬೇಕು ಎಂಬ ಮಾತ್ರ ದೃಷ್ಟಿಕೋನದಿಂದ ಸರಕಾರ ಮಾತ್ರವಲ್ಲದೇ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಇದ್ದಾರೆ.

ಇದರ ಘೋರ ಪರಿಣಾಮದಿಂದ ಪರಿಸರರದ ಅಸಮತೋಲನಗಳು ಕಾಣಸಿಗುತ್ತಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಮತ್ತೊಂದು ದುರಂತಕ್ಕೆ ಉಡುಪಿಯಲ್ಲಿ ಗುದ್ದಲಿ ಪೂಜೆ ನಡೆಸಲಾಗಿದೆ. ಉಡುಪಿಯ ಬನ್ನಂಜೆ ಬಳಿ ಸರ್ಕಾರಿ ಬಸ್ ನಿಲ್ಧಾಣ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ ಬೃಹತ್ತಾಗಿ ಬೆಳೆದಿರುವ ಮರಗಳನ್ನು ಉರುಳಿಸಲಾಗುತ್ತಿದೆ.ಈಗಾಗಲೇ ಅದೆಷ್ಟೋ ಮರಗಳು ಪ್ರಾಣಬಿಟ್ಟಾಗಿದೆ. ಇನ್ನು ನೂರಾರು ವರ್ಷಗಳೀಂದ ಬೆಳೆದಿರುವ, ಪರಿಸರಕ್ಕೆ ತಂಪು ನೀಡುತ್ತಿರುವ ಬೃಹತ್ ಮರಗಳ ಧರಾಶಾಯಿಗೆ ವೇದಿಕೆ ಸಿದ್ದವಾಗಿದೆ. ಅರಣ್ಯ ಇಲಾಖೆ ಮರಕಡಿಯಲು ಪರ್ಮೀಶನ್ ನೀಡಿದೆ. ಇನ್ನೇನು ಸ್ವಲ್ಪ ದಿನದಲ್ಲಿ ಸುಮಾರು50ಕ್ಕೂ ಹೆಚ್ಚು ಸೆನ್ಸ್ ಜಾಗದಲ್ಲಿ ಬೆಳೆದಿದ್ದ ೪೦ಕ್ಕೂ ಅಧಿಕ ಮರಗಳು ಜೆಸಿಬಿ ಅರ್ಬಟಕ್ಕೆ ನಲುಗಲಿದೆ. ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರಗಳನ್ನು ಉರುಳಿಸುವ ಕಾರ್ಯಾಚರಣೆ ನಡೆದಿದ್ದು ಮರಗಳು ಉಳಿಸಿ ತಮ್ಮ ಅಭಿವೃದ್ದಿಯನ್ನು ಮುಂದುವರೆಸಿ ಅಂತ ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.ಉಡುಪಿಯಲ್ಲಿ ಅದೆಷ್ಟೋ ಕೈಗಾರಿಕೆಗಳು ಕಾಲಿಟ್ಟಿವೆ. ಈಗಾಗಲೇ ಉಡುಪಿಯಲ್ಲಿ ಬೂಧಿ ಮಳೆ ಬಿದ್ದಾಗಿದೆ. ಮರಗಳನ್ನ ಸಂರಕ್ಷಿಸಿಲ್ಲಾ ಅಂದ್ರೆ ನಾಳೆ ನಡೆಯುವ ಘೋರ ಆಪತ್ತಿನ ಅಪಾಯವನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಉಡುಪಿಯ ನಾಗರೀಕರು ಎಚ್ಚೆತ್ತು ಮರಗಳನ್ನು ಉಳಿಸಲು ಮುಂದಾಗಬೇಕಿದೆ.

 

Related posts

Leave a Reply