Header Ads
Breaking News

ಉಡುಪಿ : ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮಿಲನಕ್ಕೆ ಭಾರೀ ವಿರೋಧ

 ಉಡುಪಿಯಲ್ಲಿ ನಡೆಸಲು ಉದ್ದೇಶಿಸಿರುವ ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮಿಲನ ಪರ ವಿರೋಧ ತಾರಕಕ್ಕೆ ಏರಿದೆ. ನಮಗೂ ಈ ಸಮಾವೇಶಕ್ಕೂ ಸಂಬಂಧ ಇಲ್ಲ ಅಂತ ಬಿಲ್ಲವ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಜನವರಿ 11ರಂದು ಉಡುಪಿಯಲ್ಲಿ ಆಯೋಜನೆಗೊಂಡಿರುವ ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮಿಲನಕ್ಕೆ ಭಾರೀ ಪರ-ವಿರೋಧ ವ್ಯಕ್ತವಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸುತ್ತಾರೆ ಎಂಬುದು ಜಾಲತಾಣಗಳಲ್ಲಿ ಪ್ರಚಾರವಾಗಿತ್ತು. ಆದ್ರೆ ಇದಕ್ಕೆ ಕೋಟ ಸ್ಪಷ್ಟನೆ ನೀಡಿ ತಾನಗೂ ಈ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಇದೀಗ ಬಿಲ್ಲವ ಮುಖಂಡರು ಸುದ್ದಿಗೋಷ್ಟಿ ನಡೆಸಿದ್ದು ಈ ಕಾರ್ಯಕ್ರಮಕ್ಕೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮಿಲನಕ್ಕೂ ಬಿಲ್ಲವರಿಗೂ ಸಂಬಂಧ ಇಲ್ಲ. ಹಿಂದೂ ಸಮಾಜವನ್ನು ಒಡೆಯುವ ಇಂತಹ ಸಮ್ಮಿಲನಕ್ಕೆ ನಮ್ಮ ವಿರೋಧ ಇದೆ. ಪೊಲೀಸರು ಈ ಸಮಾವೇಶಕ್ಕೆ ಅನುಮತಿ ನೀಡಬಾರದು. ಬಿಲ್ಲವ ಎಂಬ ಪದವನ್ನು ಕೈಬಿಡದಿದ್ದರೆ ಜನವರಿ 9ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಬಿಲ್ಲವ ಮುಖಂಡ ಕಿರಣ್ ಕುಮಾರ್ ಸೇರಿದಂತೆ ಹಲವಾರು ಮುಖಂಡರು ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *