Header Ads
Header Ads
Breaking News

ಉಡುಪಿ: ಬೊಬ್ಬರ್ಯ ಕಟ್ಟೆ ಸನಿಹದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಉಡುಪಿಯ ಲಕ್ಷ್ಮಿನಗರ ಬೊಬ್ಬರ್ಯ ಕಟ್ಟೆ ಸನಿಹದ ಹಾಡಿಯಲ್ಲಿರುವ ಆಲದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊರ್ವರ ಶವವು ನೆಲುವ ಸ್ಥಿತಿಯಲ್ಲಿ ಕಂಡು ಬಂದಿದೆ.

ಮೃತ ವ್ಯಕ್ತಿ ಲಕ್ಷ್ಮಿನಗರದ ನಿವಾಸಿ ಆಟೋ ಚಾಲಕ ಶ್ರೀಧರ ಕೊಟ್ಯಾನ್ (60) ಎಂದು ತಿಳಿದು ಬಂದಿದೆ. ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಮೃತರ ಬಳಿ ದೊರೆದ ಚೀಟಿಯ ಆಧಾರದಿಂದ ಶಂಕಿಸಲಾಗಿದೆ. ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಅಜ್ಜರಕಾಡು ಶವಗಾರಕ್ಕೆ ಸಾಗಿಸಲು ಪೊಲೀಸರಿಗೆ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಅವರು ಉಚಿತ ಅಂಬುಲೇನ್ಸ್ ಸೇವೆ ನೀಡಿ ಸಹಕರಿಸಿದ್ದಾರೆ.

Related posts

Leave a Reply