Header Ads
Header Ads
Breaking News

ಉಡುಪಿ : ಬ್ರಾಹ್ಮಣ ಸಮಾಜದ ಮಾನಸಿಕ ಯುವಕನ ರಕ್ಷಣೆ

ಸಾರ್ವಜನಿಕರಿಗೆ ಹಲ್ಲೆ ಮಾಡುತ್ತಿದ್ದ ಮಾನಸಿಕ ವ್ಯಾಧಿ ಭಾದಿತ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ವಶಕ್ಕೆ ಪಡೆದು, ದೊಡ್ಡಣಗುಡ್ಡೆಯ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ.

ಉಡುಪಿ ನಗರದಲ್ಲಿ ಭಯದ ವಾತವರಣ ಸೃಷ್ಟಿಸಿದ ಯುವಕನನ್ನು ಮಾನಸಿಕ ಅಸ್ವಸ್ಥರ ಆಶ್ರಮಗಳಿಗೆ ದಾಖಲು ಪಡಿಸುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಲ್ಲಿ ಮನವಿ ಮಾಡಿದ್ದರು. ಸಾರ್ವಜನಿಕರ ಅಳಲಿಗೆ ಸ್ಪಂದಿಸಿ ಸಮಾಜಸೇವಕ ವಿಶು ಶೆಟ್ಟಿ ಅವರು ಕೂಡು ತಾನು ಸಂಬಂಧ ಪಟ್ಟವರಿಗೆ ದೂರು ನೀಡಿದ್ದೆನೆ ಎಂದು ಹೇಳಿಕೊಂಡಿದ್ದಾರೆ. ಯಾವೊಂದು ಪ್ರತಿಸ್ಪಂದನೆ ನೀಡದೆ ಇಲಾಖೆಗಳು ಮೌನವಾಗಿರುವುದು ಯುವಕನ ರಂಪಾಟವು ಮತ್ತಷ್ಟು ಉಲ್ಭಣಗೊಳ್ಳಲು ಕಾರಣವಾಯಿತೆಂದು ಸಾರ್ವಜನಿಕರು ದೂರಿದ್ದಾರೆ.

ಹಲ್ಲೆ ನಿರತ ಮಾನಸಿಕ ಯುವಕನ ಉಪಟಳ ತಾಳಲಾರದೆ, ಸಾರ್ವಜನಿಕರು ಯುವಕನ ಮೇಲೆ ಹಲ್ಲೆ ನಡೆಸಿ, ಕೈ ಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಆ ಬಳಿಕ ನಿಟ್ಟೂರು ರಾಜ್ಯ ಮಹಿಳಾ ನಿಲಯದ ಮುಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎನ್ನುವ ವಿಷಯ ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ತಿಳಿದು ಬಂದಿದೆ. ತಕ್ಷಣ ಸ್ಪಂದಿಸಿದ ವಿಶು ಶೆಟ್ಟಿ ಅವರು ಘಟನಾ ಸ್ಥಳದತ್ತ ಧಾವಿಸಿ, ಹಗ್ಗದ ಬಂಧನದಿಂದ ಯುವಕನ ರಕ್ಷಣೆ ಮಾಡಿದ್ದಾರೆ. ನಂತರ ಯುವಕನನ್ನು ತಮ್ಮದೆ ವಾಹನದಲ್ಲಿ ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ಸಾಗಿಸಿ ದಾಖಲು ಪಡಿಸಿ ಮಾನವಿಯತೆ ಮೆರೆದಿದ್ದಾರೆ.

Related posts

Leave a Reply