Header Ads
Header Ads
Breaking News

ಉಡುಪಿ ಮೂಲದ ಗುಗ್ಗರ್ ಸ್ವಿಸ್ ಎಂಪಿ ಮಿಶನ್ ಆಸ್ಪತ್ರೆ, ಜನ್ಮ ಸ್ಥಳವನ್ನು ನೆನಪಿಸುತ್ತಿರುವ ಗುಗ್ಗರ್ ಅನಾಥ ಮಗು ಇದೀಗ ಸ್ವಿಜ್ಜರ್ಲ್ಯಾಂಡ್‌ನಲ್ಲಿ ಜನಸೇವಕ

ಉಡುಪಿಯಲ್ಲಿ 47 ವರ್ಷಗಳ ಹಿಂದೆ ತಾಯಿ ಬಿಟ್ಟು ಹೋದ ಮಗುವೊಂದು ಇಂದು ಸ್ವಿಟ್ಝರ್‌ಲ್ಯಾಂಡ್ ನ ಪಾರ್ಲಿಮೆಂಟ್ ಸದಸ್ಯನಾಗಿದ್ದಾನೆ. ಈತ ಬೇರಾರೂ ಅಲ್ಲ ಸ್ವಿಝ್ ನ ಇಪಿಪಿ ಯ ಸದಸ್ಯರಾಗಿ ಆಯ್ಕೆಯಾದ ನಿಕ್ಲಾಸ್ ನಿಕ್ ಗುಗ್ಗರ್ ಈತನ ಮೂಲ ಉಡುಪಿ ಎಂಬುದೇ ಆತನಿಗೂ ಹೆಮ್ಮೆಯ ವಿಷಯ.

ದೇವರ ಆಟ ಬಲ್ಲವರಾರು.. ಆತ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಆಗಬಹುದು. ಅನ್ನೋದಿಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇದ್ಯಾ .ಅದು ಮಿಷನ್ ಅಸ್ಪತ್ರೆ. ಕಳೆದ ೯೦ ವರ್ಷಗಳಿಂದ ಹೆರಿಗೆ ಮತ್ತು ಮಕ್ಕಳ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆ.

ಈ ಅಸ್ಪತ್ರೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಹಲವಾರು ಖ್ಯಾತನಾಮರು ಜನಿಸಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ನಿಕ್ ಗುಗ್ಗರ್ …. ಮಿಷನ್ ಅಸ್ಪತ್ರೆಗೆ ೪ ದಶಕದ ಹಿಂದೆ ಹೆರಿಗೆಗಾಗಿ ಬಂದ ತಾಯಿ ಆದ್ಯಾವ ಕಾರಣಕ್ಕೋ ಮಗುವನ್ನು ಅಲ್ಲೇ ಬಿಟ್ಟು ಹೊರಟು ಹೋದಳು. ಆ ಅನಾಥ ಮಗುವನ್ನು ಇಲ್ಲಿನ ಮಿಷನರಿಯವರಿಂದ ಕೇರಳದ ತಲಶ್ಶೇರಿಯಲ್ಲಿ ಅನಾಥಾಶ್ರಮ ನಡೆಸುತ್ತಿದ್ದ ಸ್ವಿಝ್ ಮೂಲದ ದಂಪತಿಗಳು ಆ ಮಗುವನ್ನು ದತ್ತು ಪಡೆದರು.

ಆ ಬಳಿಕ ಅವರು ಸ್ವಿಝ ಗೆ ವಾಪಾಸ್ ಮರಳುವಾಗ ದತ್ತು ಪಡೆದ ಮಗುವನ್ನೂ ಕರೆದೊಯ್ದರು. ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿದ್ದ ಆ ದಂಪತಿಗಳ ದತ್ತು ಪುತ್ರ ಇಂದು ಸ್ವಿಝ್ ಪಾರ್ಲಿಮೆಂಟ್ ನ ಸದಸ್ಯ.

ನಿಕ್ ಗುಗ್ಗರ್ ಜೊತೆ ಸಂಪರ್ಕದಲ್ಲಿರುವ ಉಡುಪಿಯ ಹೈಡಿ ಶಿರಿ ಎಂಬವರ ಮೂಲಕ ಗುಗ್ಗರ್ ಮತ್ತೆ ಉಡುಪಿಯ ಸಂಬಂಧ ಪಡೆದುಕೊಂಡಿದ್ದಾರೆ.  ಹೈಡಿ ಶಿರಿಯವರ ಅಜ್ಜಿಯೂ ಸ್ವಿಝ್ ಮೂಲದವರಾಗಿದ್ರಿಂದ ಗುಗ್ಗರ್ ತನ್ನ ಮೂಲ ನೆಲೆಯನ್ನು ತಿಳಿಯಲು ಸಾಧ್ಯವಾಗಿದೆ

ತನ್ನ ತಂದೆ ತಾಯಿಯವರಿಂದ ಬಳುವಳಿಯಾಗಿ ಬಂದ ಸಮಾಜ ಸೇವೆಯನ್ನು ಮುಂದುವರಿಸುತ್ತಿರುವ ಗುಗ್ಗರ್ ವಿಶೇಷ ಸಾಮರ್ಥ್ಯದ ಜನರೊಂದಿಗೆ ಹೆಚ್ಚು ಬೆರೆತಿದ್ದಾರೆ. ರಾಜಕೀಯವಾಗಿ ಬಹಳಷ್ಟು ಸಾಧನೆ ಮಾಡಿರುವ ಗುಗ್ಗರ್ ಇಪಿಪಿ ಪಕ್ಷದ ಹಲವು ಸ್ಥಾನಗಳನ್ನು ಅಲಂಕರಿಸಿ ಸದ್ಯ ಪಾರ್ಲಿಮೆಂಟ್ ಸದಸ್ಯನಾಗಿದ್ದಾರೆ. 2017 ರ ನವೆಂಬರ್ ನಲ್ಲಿ ಚುನಾವಣೆಯಲ್ಲಿ ಮುಂದಿನ ಲಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. . ರಾಜಕೀಯ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗುಗ್ಗರ್ ಸುನಾಮಿ ನಿಗಾ ಪಡೆಯ ಮುಖ್ಯಸ್ಥರೂ ಆಗಿದ್ದಾರೆ.ಪತ್ನಿ ಮತ್ತು ೩ ಮಕ್ಕಳ ಸಂಸಾರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದ್ದಾರೆ. 1986 ರಲ್ಲಿ ಉಡುಪಿಗೆ ಬಂದ ಗುಗ್ಗರ್ ಅವರ ಸಂಬಂಧಿ ಮತ್ತು ಪ್ರೀತಿಯ ಅಜ್ಜನ ಹಿಂದೂಸ್ಥಾನ್ ಮರದ ಮಿಲ್ಲು ಮತ್ತು ಅವರ ಮನೆಯ ಬಾಲ್ಕನಿಯನ್ನು ಬಹಳ ಇಷ್ಟಪಟ್ಟಿದ್ದರು. ಅದನ್ನೇ ತಮ್ಮ ಮಾತಿನಲ್ಲಿ ಹೇಳಿರುವ ಗುಗ್ಗರ್ ಕೃಷ್ಣ ಮಠದ ಬಗ್ಗೆಯೂ ಹೇಳಿದ್ದರು. 2018 ರ ಜನವರಿಯಲ್ಲಿ ಮತ್ತೆ ಉಡುಪಿಗೆ ಬರುವ ಸಾಧ್ಯತೆ ಇದೆ.

ವಾಯ್ಸ್_ಅನಾಥ ಶಿಶುವಾಗಿದ್ದ ವ್ಯಕ್ತಿ ಅದ್ಯಾವ ಪವಾಡದಿಂದಲೋ ಅದೃಷ್ಟದಿಂದಲೋ ಸ್ವಿಝ್ ನಂತಹ ದೇಶದ ಉನ್ನತ ಸ್ಥಾನಕ್ಕೇರಿದ್ದಾನೆ. ಈ ಸಾಧನೆಗೆ ಕೇವಲ ಸ್ವಿಝ್ ಮಾತ್ರವಲ್ಲ ಭಾರತದ ಕಾಣಿಕೆಯನ್ನು ಉಡುಪಿಯ ಮೂಲಕ ಸಾರುವಂತಾಗಿದೆ.

ಸಂತೋಷ್ ಸರಳೇಬೆಟ್ಟು ರಾಜ್ ನ್ಯುಸ್ ಉಡುಪಿ