Header Ads
Breaking News

ಉಡುಪಿ ಸರಕಾರಿ ಆಸ್ಪತ್ರೆಯನ್ನ ಬಿ.ಆರ್.ಎಸ್. ಕೈ ಬಿಟ್ಟ ವಿಚಾರ : ಸರ್ಕಾರ ಸಂಸ್ಥೆಯೊಂದಿಗೆ ನಿರ್ಧಾರದ ಒಪ್ಪಂದಕ್ಕೆ ಸಹಿ ಹಾಕಿಲ್ಲ

ಉಡುಪಿಯಲ್ಲಿರುವ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಯನ್ನ ಬಿ.ಆರ್.ಎಸ್. ಕೈ ಬಿಟ್ಟ ವಿಚಾರದ ಬಗ್ಗೆ ಬಿಆರ್‍ಎಸ್ ಸಂಸ್ಥೆಯವರು ಸ್ಪಷ್ಠೀಕರಣ ನೀಡಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಸಂಸ್ಥೆಯೊಂದಿಗೆ ನಿರ್ಧಾರದ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಪಕ್ಕದಲ್ಲೇ ನಿರ್ಮಾಣವಾಗುವ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ಪರವಾನಿಗೆ ನೀಡಿಲ್ಲ.ಅವುಗಳನ್ನು ಈಡೇರಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಈಗಿರುವ ಆಸ್ಪತ್ರೆಯನ್ನು ನಡೆಸಲು ಕಷ್ಟವಾಗಿ ಸರಕಾರಕ್ಕೆ ಒಪ್ಪಿಸಲು ಪತ್ರ ಬರೆದಿಲ್ಲ. ಈಗಾಗಲೇ ಸಂಸ್ಥೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ತಪ್ಪಾಗಿ ಅರ್ಥೈಸಿಕೊಂಡು ಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ಬಿ.ಆರ್.ಎಸ್. ಹೆಲ್ ರಿಸರ್ಚ್ ಇನ್ಸಿಟ್ಯೂಟ್ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *