Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿ : ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಮತ್ತು ತುಳು ಯಕ್ಷಗಾನ ವೈಭವ

ಸ್ವಾತಂತ್ರ್ಯೊತ್ಸವವನ್ನು ವಿಶೇಷ ಕಲಾ ಕಾರ್ಯಕ್ರಮದ ಮೂಲಕ ಆಚರಿಸುವ ಪರಿಕಲ್ಪನೆಯೊಂದಿಗೆ 1990ರಂದು ಆರಂಭಿಸಿದ ಸ್ವಾತಂತ್ರ್ಯೋತ್ಸವ ತಾಳ ಮದ್ದಳೆಯು ಇದೀಗ 30ನೇ ವರ್ಷದ ಸಂಭ್ರಮದಲ್ಲಿದೆ ಎಂದು ಕಾರ್ಯಕ್ರಮ ಸಂಘಟಕರಾದ ಸುಧಾಕರ ಆಚಾರ್ಯ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಾರಾಧನೆಯ ಸ್ವಾತಂತ್ರ್ಯೂತ್ಸವದ ಮೂವತ್ತರ ವರ್ಷಾಚರಣೆಯು ಉಡುಪಿಯ ಪಿಪಿಸಿ ಆಡಿಟೋರಿಯಂನಲ್ಲಿ ಆಗಸ್ಟ್ 15ರಂದು ಮಧ್ಯಾಹ್ನ 1.30ರಿಂದ ರಾತ್ರಿ 10.30ರ ತನಕ ಪ್ರಸಿದ್ದಕಲಾವಿದರ ಕೂಡುವಿಕೆಯೊಂದಿಗೆ “ಅಂಬೆ” ತಾಳಮದ್ದಳೆ ಹಾಗೂ ತುಳು ಯಕ್ಷಗಾನ -ತುಳುನಾಡ ಬಲೀಯೇಂದ್ರ ಪ್ರದರ್ಶನ ನಡೆಯಲಿದ್ದು ಶ್ರೀಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರು ಪಂಚರತ್ನ ದೀಪಮಾಲ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಧರ್ಮಸ್ಥಳದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಭುವನೇಂದ್ರ ಪ್ರಸಾದ್, ರತ್ನಾಕರ ಕಲ್ಯಾಣಿ ಪೆರ್ಡೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *