Header Ads
Header Ads
Breaking News

ಉಡುಪಿ : ಹಲ್ಲೆಗೊಳಗಾಗುತ್ತಿರುವ ಮಾನಸಿಕ ಭಿನ್ನ ಸಾಮರ್ಥ್ಯದ ಬಾಲಕನ ರಕ್ಷಣೆ

ನಗರದ ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದ ಅಪರಿಚಿತ ಮಾನಸಿಕ ಭಿನ್ನ ಸಾಮರ್ಥ್ಯದ ಬಾಲಕನನ್ನು ಉಡುಪಿಯ ಸಮಾಜಸೇವಕರು ರಕ್ಷಿಸಿ, ಕಾರ್ಕಳದ ವಿಜೇತ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಆಶ್ರಯ ಕಲ್ಪಿಸಿದ ಘಟನೆ ನಡೆದಿದೆ. ಅಯ್ಯೋಮಯ ಸ್ಥಿತಿಯಲ್ಲಿ ದಿನಗಳ ಕಳೆಯುತ್ತಿದ್ದ ಅಸಹಾಯಕ ಬಾಲಕನ ರಕ್ಷಣಾ ಕಾರ್ಯಚರಣೆಯು ನಾಗರಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದ ಬಾಲಕನನ್ನು ಗಮನಿಸಿದ ಪ್ರಾಣೇಶ್ ಹೆಜಮಾಡಿ ಅವರು, ಶೌಚಾದಿಗಳನ್ನು ಮಾಡಿಕೊಂಡ ಬಾಲಕನ ಸ್ನಾನ ಮಾಡಿಸಿ ಶುಚಿಗೊಳಿಸಿದ್ದಾರೆ. ಅನ್ನ ಆಹಾರ ಇಲ್ಲದೆ ಹಸಿದ ಬಾಲಕನಿಗೆ ಆಹಾರದ ವ್ಯವಸ್ಥೆಗೊಳಿಸಿ ಉಪಚರಿಸಿದ್ದಾರೆ. ಅಮಾಯಕ ಬಾಲಕ ಸಾರ್ವಜನಿಕರಿಂದ ಹಲ್ಲೆಗೊಳಗಾಗುವ ವಿಷಯ ತಿಳಿದು, ಬಾಲಕನಿಗೆ ಸುವ್ಯವಸ್ಥಿತ ನೆಲೆ ಕಲ್ಪಿಸುವ ಉದ್ಧೇಶದಿಂದ ಸಮಾಜಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಪಂದಿಸಿದ ಸಾಮಾಜಸೇವಕರು ಬಾಲಕನಿಗೆ ಸೂಕ್ತ ನೆಲೆ ಕಲ್ಪಿಸಲು ನಗರದಲ್ಲಿ ಕಾರ್ಯನಿರತ ಬುದ್ದಿ ಮಾಂದ್ಯ ವಸತಿ ಶಾಲಾ ನಿಲಯಗಳಲ್ಲಿ ವಿಚಾರಿಸಿದ್ದಾರೆ. ಆದರೆ ಅವರಿಗೆ ಏಲ್ಲಿಯೂ ಸ್ಪಂದನೆ ದೊರೆಯದೆ ನಿರಾಕರಣೆಯ ಉತ್ತರ ಎದುರಾಗಿದೆ ಎಂದು ತಿಳಿದು ಬಂದಿದೆ.

ಸ್ಪಂದಿಸಿದ ವಿಜೇತ ವಿಶೇಷ ಮಕ್ಕಳ ಶಾಲೆ.

ಬಾಲಕನ ಹೆತ್ತವರ ಮಡಿಲಿಗೆ ಸೇರಿಸಲು ಬಾಲಕ ಮಾತನಾಡಲು ಶಕ್ತನಾಗಿರದ ಕಾರಣ ಬಾಲಕನ ಪೂರ್ವಾಪರ ವಿಳಾಸ ತಿಳಿಯಲು ಸಾಮಾಜಿಕ ಕಾರ್ಯಕರ್ತರು ವಿಫಲರಾಗಿದ್ದಾರೆ. ಹಾಗಾಗಿ ಸದಾ ವಿಶೇಷ ಚೇತನ ಮಕ್ಕಳ ಸೇವೆಯಲ್ಲಿ ನಿರತರಾಗಿರುವ, ಕಾರ್ಕಳದ ವಿಜೇತ ವಿಶೇಷ ಮಕ್ಕಳ ವಸತಿ ಶಾಲೆಯ, ಸಂಚಾಲಕಿ ಡಾ.ಕಾಂತಿ ಹರೀಶ್ ಅವರನ್ನು ವಿಶು ಶೆಟ್ಟಿ ಅವರು ಸಂಪರ್ಕಿಸಿ ಘಟನೆಯ ವಿಷಯ ಪ್ರಸ್ತಾಪಿಸಿದ್ದಾರೆ. ತಕ್ಷಣ ಸ್ಪಂದಿಸಿದ ಡಾ.ಕಾಂತಿ ಹರೀಶ್ ಅವರು ತಮ್ಮ ಶಾಲೆಯಲ್ಲಿ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರು. ಆ ಬಳಿಕ ವಿಶು ಶೆಟ್ಟಿ ಅವರು ನಗರ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಬಳಿಕ ತಮ್ಮದೆ ವಾಹನದಲ್ಲಿ ಬಾಲಕನನ್ನು ಕಾರ್ಕಳದ ವಿಜೇತ ವಿಶೇಷ ಶಾಲಾ ಮಕ್ಕಳ ವಸತಿ ನಿಲಯಕ್ಕೆ ದಾಖಲು ಪಡಿಸಿದ್ದಾರೆ. ವಿಜೇತ ವಿಶೇಷ ಚೇತನ ಶಾಲಾ ಸಂಸ್ಥೆಯ ಸೇವಾ ಚಟುವಟಿಕೆ ಗಮನಿಸಿದ ವಿಶು ಶೆಟ್ಟಿ ಅವರು 5 ಸಾವಿರ ದೆಣಿಗೆಯನ್ನು ಸಂಸ್ಥೆಗೆ ನೀಡಿದ್ದಾರೆ. ಬಾಲಕನ ಕಾರ್ಯಚರಣೆಯಲ್ಲಿ ತಾರಾನಾಥ್ ಮೇಸ್ತ ಶಿರೂರು, ಪ್ರಾಣೇಶ್ ಹೆಜಮಾಡಿ ಸಹಕರಿಸಿದ್ದಾರೆ. ವಿಜೇತ ವಿಶೇಷ ಶಾಲೆಯ ಶಾಲ ವಾರ್ಷಿಕೋತ್ಸವ ಕಾರ್ಯಕ್ರಮವು ಅದೇ ದಿನ ರಾತ್ರಿ ಶಾಲೆಯ ಆಶ್ರಯದಲ್ಲಿ ನಡೆದಿತ್ತು. ಅಲ್ಲಿಯ ವಿದ್ಯಾರ್ಥಿಗಳೊಂದಿಗೆ ಬಾಲಕ ಬೆರೆತು ಸಾಂಸ್ಕ್ರತಿಕ ವೇದಿಕೆಯಲ್ಲಿ ಶಾಲಾ ಮಕ್ಕಳೊಂದಿಗೆ ನೃತ್ಯ ಮಾಡಿದ್ದು ವಿಕ್ಷಕರ ಗಮನ ಸಳೆದಿದೆ. ಬಾಲಕನ ಪ್ರತಿಭೆ ಕಂಡ ಶಾಲಾ ಸಂಚಾಲಕಿ ಡಾ.ಕಾಂತಿ ಹರೀಶ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts

Leave a Reply