Header Ads
Header Ads
Breaking News

ಉಡುಪಿ:ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಡಯಾಲಿಸಿಸ್ ಸಮಸ್ಯೆ

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸ ಕೋಳ್ಳಬೇಕಾದ ರೋಗಿಗಳು, ಸಮರ್ಪಕ ಸೇವೆ ಇಲ್ಲದೆ ಪರದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ.ತುರ್ತು ಸೇವೆ ಪಡೆಯ ಬೇಕಾದ ರೋಗಿ ಸಾವಿನ ದವಡೆಗೆ ಸಿಲುಕಿದ ಘಟನೆನಡೆದಿದೆ. ಸಮಾಜಸೇವಕ ವಿಶು ಶೆಟ್ಟಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಗೊಳಿಸಿ ಯುವಕನ ಪ್ರಾಣ ರಕ್ಷಿಸಿದ್ದಾರೆ.

ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಉಡುಪಿ ಜಿಲ್ಲಾ ಆಸ್ಪತ್ರೆ ಇದೀಗ ತುರ್ತು ಡಯಾಲಿಸಿಸ್ ಯಂತ್ರವಿಲ್ಲದೇ ಬಡ ರೋಗಿಗಳ ಪಾಲಿಗೆ ವಿಲನ್ ಆಗಿದೆ. ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ಯಂತ್ರಗಳ ಕೊರತೆ ಎದುರಿಸುತ್ತಿರುವ ಸರಕಾರಿ ಆಸ್ಪತ್ರೆಯನ್ನು ಮೇಲೆತ್ತಲು ಸರಕಾರ ಕೂಡಾ ನಿರ್ಲಕ್ಷ್ಯ ವಹಿಸುತ್ತಿದೆ. ಸೂಕ್ತ ಡಯಾಲಿಸ್ ಯಂತ್ರವಿಲ್ಲದೇ ಡಯಾಲಿಸಿಸ್ ಮಾಡಿಸಿಕೊಳ್ಳುವವರು ಬೇರೆ ಖಾಸಗೀ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಕೆಲವೊಮ್ಮೆ ತುರ್ತಾಗಿ ಡಯಾಲಿಸಿಸ್ ಸಿಗದೇ ಹೋದರೆ ಪ್ರಾಣಾಪಾಯ ಖಂಡಿತ. ಇಂತಹ ಒಂದು ಘಟನೆ ನಡೆದಿದ್ದು ತುರ್ತಾಗಿ ಡಯಾಲಿಸ್ ಮಾಡಿಸ ಕೋಳ್ಳಬೇಕಾದ ಬಡ ರೋಗಿ ಗಣೇಶ್ (38ವ) ತುರ್ತು ಚಿಕಿತ್ಸೆ ಪಡೆಯಲಾಗದೆ ಅಸಹಾಯಕ ಸ್ಥಿತಿ ಎದುರಿಸುವಂತಾಗಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಸಿಗದೇ ಅಸಾಯಕರಾಗಿದ್ದ ಗಣೇಶ್ ಅವರಿಗೆ ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಮಾನವೀಯ ಮೆರೆದು ಖಾಸಗೀ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗಾಗಿ ವ್ಯವಸ್ಥೆ ಮಾಡಿದ್ದಾರೆ.

 ವ್ಯೆದ್ಯರ ಸಲಹೆಯಂತೆ ಸಂಬಂಧಿಕರು ಗಣೇಶ್ ಅವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಕರೆದು ಕೊಂಡು ಹೋಗಿದ್ದಾರೆ. ಎರಡು ದಿನಗಳ ಕಳೆದರೂ ಆಸ್ಪತ್ರೆಯಲ್ಲಿ ಸ್ಪಂದನೆ ದೊರೆತ್ತಿಲ್ಲ.ಪರಿಪರಿಯಾಗಿ ಸೇವೆ ಒದಗಿಸುವಂತೆ ಕೇಳಿಕೊಂಡರೂ, ಸಿಬ್ಬಂದಿಗಳು ಸೇವೆ ಒದಗಿಸಲು ಅಸಡ್ಡೆಯ ತೋರಿದ್ದಾರೆ.ಕೊನೆಗೆ ದಿಕ್ಕು ಕಾಣದೆಸಮಾಜ ಸೇವಕ ವಿಶು ಶೆಟ್ಟಿ ಅವರು ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ವ್ಯವಸ್ಥೆಗೊಳಿಸಿ ಮರಣ ಸಂಭವಿಸುವ ಹಂತದಲ್ಲಿರುವ ರೋಗಿಯನ್ನು ರಕ್ಷಿಸಲಾಗಿದೆ.ತುರ್ತು ಸಂದರ್ಭಗಳಲ್ಲಿ ಸಂಭವನಿಯ ದುರಂತಗಳಿಂದ ರಕ್ಷಿಸಲು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವಸರೋಗಿಗಳಿಗೆ ಹೆಚ್ಚುವರಿ ಯಂತ್ರವನ್ನು ಅಳವಡಿಸ ಬೇಕೆಂದು ಒತ್ತಾಯ ಕೇಳಿಬಂದಿದೆ. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆ ಈ ವ್ಯವಸ್ಥೆ ಮಾಡಲಾಗದೇ ಕೈ ಚೆಲ್ಲಿ ಕುಳಿತಿದೆ.

ಒಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ತುರ್ತಾಗಿ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಅಳವಡಿಸದೇ ಇದ್ದರೆ ಬಡರೋಗಿಗಳ ಸಮಸ್ಯೆ ಉಲ್ಬಣಿಸಲಿದೆ.ಆದ್ದರಿಂದ ಜಿಲ್ಲಾಡಳಿತ ಸರಕಾರ ತುರ್ತಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

 

Related posts

Leave a Reply