Header Ads
Breaking News

ಉಡುಪಿಯ ಅತ್ರಾಡಿ ಗ್ರಾಮಸ್ಥರಿಂದ ರಸ್ತೆ ಬದಿ ಕಸ ಹಾಕುವವರ ವಿರುದ್ಧ ಆಕ್ರೋಶ

ರಸ್ತೆ ಬದಿ ಕಸ ಹಾಕುವವರ ವಿರುದ್ಧ ಆತ್ರಾಡಿ ಗ್ರಾಮಸ್ಥರು ವಿಶಿಷ್ಟವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಿರಿಯಡ್ಕದ ಓಂತಿಬೆಟ್ಟು ಸಮೀಪ 169 ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಆಕರ್ಷಣೀಯ ಬರಹದ ಫ್ಲೆಕ್ಸ್ ಅಳವಡಿಸುವ ಮೂಲಕ ರಸ್ತೆ ಬದಿ ಕಸ ಹಾಕುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಬೈಗುಳದ ಬ್ಯಾನರ್ ಅಳವಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಯವಿಟ್ಟು ಇಲ್ಲಿ ಕಸ ಹಾಕಬೇಡಿ ಎಂಬ ಕೋರಿಕೆಯ ಬ್ಯಾನರ್ ಅಳವಡಿಸಲಾಗಿತ್ತು. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ. ಹೆದ್ದಾರಿಯ ಬದಿಯಲ್ಲಿ ದಿನನಿತ್ಯ ಕಸವನ್ನು ಎಸೆದು ಹೋಗುತ್ತಿದ್ದರು. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಇದೀಗ ಬೈಗುಳದ ಬ್ಯಾನರ್ ಅಳವಡಿಸಿದ್ದಾರೆ. ಇಲ್ಲಿ ಕಸ ಹಾಕಿ ಧರ್ಮಕ್ಕೆ ಅನೈತಿಕ ಸಂಬಂಧಕ್ಕೆ ಹುಟ್ಟಿದ ಕೂಸು ಆಗುವುದು ಬೇಡವೆಂದು ಮುಂದಿನ ದಿನಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದು. ಅಥವಾ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಬಹುದು. ಒಂದು ಮಾಹಿತಿಯ ಪ್ರಕಾರ ಬ್ಯಾನರ್ ಅಳವಡಿಸಿದ ಬಳಿಕ ಕಸ ಹಾಕುವುದು ಕಡಿಮೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

Related posts

Leave a Reply

Your email address will not be published. Required fields are marked *