Header Ads
Breaking News

ಬೆಂಗಳೂರಿನ ಕ್ಯಾರಿಬ್ಯಾಗ್ ಫೌಂಡೇಶನ್ ಮತ್ತು ಪ್ರೋಟೆಕ್ಟ್ ಇನ್ಫ್ರಸ್ಟ್ರಕ್ಚರ್‌ನಿಂದ ಸರಕಾರಿ ಅನುದಾನಿತ ಶಾಲೆಗಳಿಗೆ ಶುಚಿತ್ವ ಕಿಟ್ ವಿತರಣೆ

ಬೆಂಗಳೂರಿನ ಕ್ಯಾರಿಬ್ಯಾಗ್ ಫೌಂಡೇಶನ್ ಮತ್ತು ಪ್ರೋಟೆಕ್ಟ್ ಇನ್ಫ್ರಸ್ಟ್ರಕ್ಚರೆ ಲಿಮಿತೆಡ್ ಇವರ ಸಹಯೋಗದಲ್ಲಿ ರೋಟರಿ ಕ್ಲಬ್ ಅಂಬಲಪಾಡಿ ವತಿಯಿಂದ ಉಡುಪಿ ಆಸುಪಾಸಿನ ಸುಮಾರು ೧೦೦ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶೌಚಾಲಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ನ ಅಧ್ಯಕ್ಷ ಕಲೀಲ್ ಅಹಮದ್ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಸ್ವಚ್ಛ ಭಾರತ ಅಭಿಯಾನದ ರಾಷ್ಟ್ರದಾದ್ಯಂತ ಶಾಲಾ ಕಾಲೇಜುಗಳಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಫಾರಿನ್ ಸ್ಕೂಲ್ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣ ತಿಂಗಳ ಕೊಡುಗೆಗಳನ್ನು ಹಮ್ಮಿಕೊಂಡಿದೆ ಈ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ ಶಾಲೆಗಳಿಗೆ ಸರಿಯಾದ ಯೋಜನೆಗಳನ್ನು ಹಮ್ಮಿಕೊಂಡಿದ್ದು ಶಾಲೆಗಳಿಗೆ ಸಂಬಂಧಿಸಿದ ಫ್ಲೂರ್ ಕ್ಲೀನರ್ ಟಾಯ್ಲೆಟ್ ಕ್ಲೀನರ್ ಹ್ಯಾಂಡ್ ವಾಶ್ ಬ್ರಷ್ ಕೈಚೀಲಗಳು ಒಳಗೊಂಡ ಕಿಟ್ ಅನ್ನು ವಿತರಿಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಉಡುಪಿಯ ಸಾಂಕೇತಿಕವಾಗಿ ೪ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಿಟ್ಟನ್ನು ವಿತರಿಸಲಾಯಿತು.ಕ್ಯಾರಿಬ್ಯಾಗ್ ಫೌಂಡೇಶನ್ ನ ನಿರ್ದೇಶಕ ರಘುನಾಥ್ ಅವರು ಮಾತನಾಡಿ ದೇಶದ ಹತ್ತು ಸಾವಿರ ಶಾಲೆಗಳಿಗೆ ಇಂತಹ ಶುಚಿತ್ವ ಕಿಟ್ ಗಳನ್ನು ನೀಡುವ ಗುರಿ ಹೊಂದಿದೆ ಮುಂದಿನ ಹಂತದಲ್ಲಿ ಸರಕಾರಿ ಆಸ್ಪತ್ರೆ ಸರಕಾರಿ ಹಾಸ್ಟೆಲ್ ಪೊಲೀಸ್ ಠಾಣೆಗಳಿಗೂ ಕಿಟ್ ನೀಡಲಾಗುವುದು ಇದೊಂದು ನಿರಂತರ ಶಾಶ್ವತ ಯೋಜನೆಯಾಗಿದೆ ಈಗ ಶಾಲೆಗಳಿಗೆ ನೀಡುವ ಒಂದು ತಿಂಗಳವರೆಗೆ ಬಳಕೆಗೆ ಸಾಕಾಗಬಹುದು ಅದು ಮುಗಿದ ಕೂಡಲೇ ಮತ್ತೆ ಪೂರೈಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ ನಮಗೆ ಸೇವಾ ಸಂಸ್ಥೆಗಳ ಮೂಲಕ ಇದನ್ನು ಒದಗಿಸಿಕೊಡಲಾಗುವುದು ಅಲ್ಲದೆ ಮೂಲಕ ಕಳಿಸಿ ಕೊಡುವ ಯೋಜನೆ ಕೂಡ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ಸುಬ್ಬಣ್ಣ ಅಶೋಕ್ ಕುಮಾರ್ ಕ್ಯಾರಿಬ್ಯಾಗ್ ಫೌಂಡೇಶನ್ ನ ನಿರ್ದೇಶಕ ಆನಂದ್ ದುರ್ಗಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *