Header Ads
Header Ads
Breaking News

ಕರಾವಳಿಯ ದೈವ ದೇವರಿಗೂ ತಟ್ಟಿತು ಎಲೆಕ್ಷನ್ ಬಿಸಿ: ಕಲಾವಿದರ ಅಸಮಾಧಾನಕ್ಕೆ ಕಾರಣವೇನು ಗೊತ್ತೇ?

ಕರಾವಳಿ ಜಿಲ್ಲೆಗಳಲ್ಲಿ ಈಗ ಕತ್ತಲಾಗೋದಿಲ್ಲ.ಯಾಕ್ ಗೊತ್ತಾ? ವರ್ಷಂಪ್ರತಿ ಎಪ್ರೀಲ್, ಮೇ ತಿಂಗಳ ಬಂತೂಂದ್ರೆ ಜಾತ್ರೆ, ದೈವದ ಕೋಲ, ಯಕ್ಷಗಾನದ್ದೇ ಕಲರವ. ಸೂರ್ಯಾಸ್ಥ ಆಯ್ತೂಂದ್ರೆ ಯಕ್ಷಲೋಕ ತೆರೆದುಕೊಳ್ಳುತ್ತೆ. ಪ್ರತಿದಿನ ನೂರಕ್ಕೂ ಅಧಿಕ ಯಕ್ಷಗಾನ ಪ್ರದರ್ಶನಗಳು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ನಾನಾಭಾಗಗಳಲ್ಲಿ ನಡೆಯುತ್ತೆ. ಬೆಳಗ್ಗಿನ ಜಾವದವರೆಗೂ ಯಕ್ಷಗಾನ ಪ್ರದರ್ಶನ ಏರ್ಪಾಡಾಗುತ್ತೆ. ಪ್ರತೀ ಗ್ರಾಮದಲ್ಲೂ ದೇವಾಲಯ ಇದೆ. ಎಲ್ಲಾ ದೇವಾಲಯಗಳಲ್ಲೂ ಜಾತ್ರೆ ನಡೆಯೋದು ಇದೇ ತಿಂಗಳಲ್ಲಿ. ಇನ್ನು ದೈವದ ಕೋಲಕ್ಕೂ ಇದೇ ಸೀಸನ್. ದೂರದ ಮುಂಬೈ, ದುಬೈ, ಬೆಂಗಳೂರಿನಿಂದ ದೈವ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳೋಕೆ ಅಂತಾನೆ ಸಾವಿರಾರು ಜನ ತವರಿಗೆ ಬರ್ತಾರೆ. ಆದ್ರೆ ಈ ಎಲ್ಲಾ ಆಚರಣೆಗೂ ಚುನಾವಣೆಯ ಬಿಸಿ ತಟ್ಟಲಿದೆ. ಸಾರ್ವಜನಿಕ ಪೂಜೆಗಳಿಗೂ ಮುನ್ನ ಪರ್ಮಿಷನ್ ಕಡ್ಡಾಯವಾಗಿದೆ. ಇಲ್ಲಾಂದ್ರೆ ನಿಮ್ಮ ಆಚರಣೆಗೆ ತಡೆ ಬೀಳುತ್ತೆ ಹುಷಾರ್ ಅಂತಾರೆ ಅಧಿಕಾರಿಗಳು. ಯಾವುದೇ ಜಾತ್ರೆ, ಯಕ್ಷಗಾನ ನಡೆಸಲು ಪರವಾನಿಗೆ ಪಡೆಯಲೇಬೇಕು. ಅದರಲ್ಲೂ 10 ಗಂಟೆಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ಚುನಾವಣಾಧಿಕಾರಿಗಳು ನಿಯಮ ರೂಪಿಸಿದ್ದಾರೆ. ಇದೇನೂ ಹೊಸತಲ್ಲ, ಮೊದಲೇ ಚಾಲ್ತಿಯಲ್ಲಿರುವ ನಿಯಮಾವಳಿ. ಈಗ ಕಟ್ಟುನಿಟ್ಟಿನ ಜಾರಿಗೆ ಸಿದ್ದತೆ ನಡೆದಿದೆ. ಇದರಿಂದ ಕರಾವಳಿ ಭಾಗದ ಆಚರಣೆಗಳಿಗೆ ಅಡ್ಡಿಯಾಗಿದೆ. ಯಕ್ಷಗಾನ ಪ್ರದರ್ಶನ ರಾತ್ರಿ ಬೆಳಗ್ಗೆವರೆಗೆ ನಡೆಯುತ್ತೆ ,ಪ್ರದರ್ಶನದ ವೇಳೆ ಲೌಡ್ ಸ್ಪೀಕರ್ ಖಡ್ಡಾಯ ಬೇಕೇ ಬೇಕು. ಇನ್ನು ಜಾತ್ರೆ, ಕೋಲಗಳೂ ಅಷ್ಟೇ ಬೆಳಗ್ಗಿನಜಾವದ ವರೆಗೂ ಇರುತ್ತೆ. ಇವೆಲ್ಲಾ ಶತಮಾನಗಳಿಂದ ನಡೆದು ಬಂದ ಆಚರಣೆಗಳು.ಇಲ್ಲಿ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳಬೇಕೇ ಹೊರತು, ಈ ಆಚರಣೆಗಳ ಮೂಲಸ್ವರೂಪಕ್ಕೆ ಧಕ್ಕೆ ಮಾಡಬಾರದು ಅನ್ನೋದು ಕರಾವಳಿಗರ ಒತ್ತಾಯ.ಜಾತ್ರೆ ಸೀಸನ್ ವೇಳೆಯಲ್ಲಿ ಚುನಾವಣೆ ಬಂದಿರುವ ಕಾರಣ ಗ್ರಾಮೀಣ ಭಾಗದ ಜನ ಪರವಾನಿಗೆಗೆ ಕಚೇರಿ ಅಲೆದಾಡುವಂತಾಗಿದೆ.ಎಲ್ಲಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸುವ ಸವಾಲು ಅಧಿಕಾರಿಗಳ ಮುಂದಿದೆ. ಹಾಗಾಗಿ ನಿಯಮಾವಳಿಗಳನ್ನು ಸರಳೀಕರಿಸಲು ಒತ್ತಾಯ ಕೇಳಿಬಂದಿದೆ.

Related posts

Leave a Reply

Your email address will not be published. Required fields are marked *