Header Ads
Breaking News

ಕೇರಳ ಸೀನಿಯರ್ ಸಿಟಿಝನ್ಸ್ ಫೋರಂನ ರಾಜ್ಯ ಸಮ್ಮೇಳನ

ಕೇರಳ ಸೀನಿಯರ್ ಸಿಟಿಝನ್ಸ್ ಫೋರಂನ 22ನೇ ರಾಜ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಸಮ್ಮೇಳನವು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಉದ್ಘಾಟಿಸಿದರು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿರಿಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರವು ಗಮನಹರಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ಪ್ರೇರಣೆಯಾಗಲಿ. ರೈಲು ಪ್ರಯಾಣದಲ್ಲಿ ಹಿರಿಯರಿಗೆ ಲಭಿಸುವ ರಿಯಾಯಿತಿ ದರ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಲಭಿಸುವಂತಾಗಬೇಕು ಎಂದು ಹೇಳಿದರು..

ದೇ ವೇಳೆ ಜಿಲ್ಲಾ ಅಧ್ಯಕ್ಷ ಟಿ. ಅಬೂಬಕ್ಕರ್ ಹಾಜಿ ಸಮ್ಮೇಳನದ ವಿಶೇಷ ಪುರವಣಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಡಾ.ಮೋಹನ್ ಕುಮಾರ್, ಚಿಂಡ ಪೊದುವಾಳ್, ಪಿ. ಬಾಲಕೃಷ್ಣನ್ ನಾಯರ್ ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾಸರಗೋಡು ಜಿಲ್ಲಾ ಪಂಚಾಯತ್‌ನ ಸದಸ್ಯ ನ್ಯಾಯವಾದಿ ಕೆ ಶ್ರೀಕಾಂತ್, ಬಾಬು ಮಾಸ್ತರ್ ಅಗಲ್ಪಾಡಿ. ರಾಜ್ಯ ಕಾರ್ಯದರ್ಶಿ ಜೋರ್ಜ್ ವರ್ಗೀಸ್, ಮಾಹಿನ್ ಕೇಳೋಟ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *