Header Ads
Breaking News

ನದಿಗೆ ಹಾರಿ ಯುವಕ ಆತ್ಮಹತ್ಯೆ: ಕಾಪುವಿನ ಉದ್ಯಾವರದಲ್ಲಿ ನಡೆದ ಘಟನೆ

ನದಿಗೆ ಹಾರಿ ಯುವಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಪು ತಾಲೂಕಿನ ಉದ್ಯಾವರ ಗ್ರಾಮದಲ್ಲಿ ನಡೆದಿದೆ. ಉದ್ಯಾವರ ಸೇತುವೆಯಿಂದ ಪಾಪಾನಾಶಿನಿ ನದಿಗೆ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಾವರ ನಿವಾಸಿ ಆಶೋಕ್ ಎಂಬವರು ನದಿಗೆ ಹಾರಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಕೆಲ ತಾಸುಗಳ ಕಾಲ ಈಜು ತಜ್ಞರು ಶೋಧ ನಡೆಸಿ ಮೃತದೇಹ ಮೇಲಕೆತ್ತಿದ್ದಾರೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *