Header Ads
Header Ads
Breaking News

ನಿಧಿ ಆಸೆಗೆ 12ನೇ ಶತಮಾನದ ಕೆರೆ ಒತ್ತುವರಿ ಆರೋಪ: ಕೆರೆ ಅವಸಾನವಾದರೆ ಪಶುಪಕ್ಷಿಗಳಿಗೆ ನೀರಿಗೂ ತತ್ವಾರ.

ಆ ಕಾಡಿನ ಮಧ್ಯೆ ಎರಡು ಕೆರೆಗಳು. ಆ ಎರಡೂ ಕೆರೆಗಳು ಅಭಿವೃದ್ದಿ ಕಾಣದೆ ಅವಸಾನದ ಅಂಚಿನಲ್ಲಿದೆ. ಆ ಕೆರೆಗೆ ಇದೀಗ ಒತ್ತುವರಿ ಸಂಕಷ್ಟ. ಎಸ್.. ಪಾಳೆಗಾರರ ಆಕ್ರಮಣಕ್ಕೆ ಅಂಜಿ ದೇವಸ್ಥಾನದ ಅರ್ಚಕರೊಬ್ಬರು ದೇವಸ್ಥಾನದ ಅಪಾರ ಸಂಪತ್ತನ್ನು ಕೆರೆಗೆ ಹಾಕಿದ್ದಾರೆ ಎಂಬ ನಂಬಿಕೆಯೇ ಇದೀಗ ಕೆರೆ ಒತ್ತುವರಿಗೆ ಕಾರಣವಾಗಿದೆ.

ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಮುದೂರು ಹಳಕಟ್ಟೆ ಇದೀಗ ಒತ್ತುವರಿ ಎದುರಿಸುತ್ತಿದೆ. ಈ ಕೆರೆಯಲ್ಲಿ ಹೇರಳ ನಿಧಿ ಇದೆ ಎಂಬ ನಂಬಿಕೆಯೇ ಇದೀಗ ಕೆರೆಗೆ ಮುಳುವಾಗುತ್ತಿದೆ. ಕಾಡು ಪ್ರಾಣಿಗಳು ಕುಡಿಯುವ ನೀರಿಂದ ವಂಚಿತವಾಗುವ ಅಪಾಯ ಎದುರಿಸಬೇಕಾಗಿದೆ. ಪುರಾತನ ಇತಿಹಾಸದ ಕೆರೆ ಕೊತ್ತಲ, ಪ್ರಾಚ್ಯವಸ್ತು, ದೇವಸ್ಥಾನಗಳು ಸರ್ಕಾರಿ ಸೊತ್ತಾಗಿದ್ದು, ಅಧಿಕಾರಿಗಳ ನಿರ್ಲಕ್ಷ, ಜನಪ್ರತಿನಿಧಿಗಳ ಓಲೈಕೆ ರಾಜಕಾರಣಕ್ಕೆ ಈ ಕೆರೆ ಮುಂದಿನ ದಿನದಲ್ಲಿ ಮುಚ್ಚಿ ಹೋದರೂ ಅಚ್ಚರಿಯಿಲ್ಲ. ಹಳಕಟ್ಟೆ ಕೆರೆ ಈಗಾಗಲೇ ಒತ್ತುವರಿಗೆ ಇಂಚಿಂಚು ಕರಗುತ್ತಿದ್ದು, ಅಂಗೈಅಗಲಕ್ಕೆ ಇಳಿದಿದೆ. ಹಿಂದಿನವರ ದೂರದೃಷ್ಟಿಯ ಫಲವಾಗಿ ದೇವರ ಅಭಿಷೇಕಕ್ಕೆ, ಪರಿಸರದ ಜನರಿಗೆ ನೀರಿನ ದಾಹ ಜತೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸೆಲೆ ಬರಿದಾದರೆ ಮುಂದಿನ ದುರಂತ ನೆನೆಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಒಟ್ಟಾರೆ ಈಗಾಗಲೇ ಮದಗ, ಕೆರೆ, ಗೋಮಾಳ, ಮದಗಗಳು ಒತ್ತುವರಿಗೆ ನಾಮಾವಶೇಷ ಹೊಂದಿದ್ದು, ಇದ್ದಬದ್ದ ಕೆರೆಕಟ್ಟುಗಳ ಮೇಲೆ ಒತ್ತುವರಿ ಕತ್ತಿತೂಗುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಹಿಂದೆ ಇತ್ತು ಎನ್ನಲಾದ ಶ್ರೀ ವಿಷ್ಣು ದೇವಸ್ಥಾನ ನಾಮಾವಶೇಷ ಹೊಂದಿದ ಹಾಗೆ ಕೆರೆಯೂ ನಾಪತ್ತೆಯಾಗುತ್ತದಾ ಎನ್ನುವ ಭಯ ಪರಿಸರ ಜನರ ನಿದ್ದೆ ಗೆಡಿಸಿದೆ. ಹೌದು.. ಹಿಂದೆ ಹಳೆಕಟ್ಟು ಶ್ರೀ ವಿಷ್ಣು ದೇವಸ್ಥಾನ ಇದೆ ಎನ್ನಲಾದ ಸ್ಥಳದಲ್ಲಿ ಎರಡು ಕೆರೆ ಇದೆ. ಒಂದು ಕೆರೆ ಮೇಲ್ಗಡೆಯಿದ್ದರೆ ಮತ್ತೊಂದು ಕೆರೆ ಅನತಿ ದೂರದ ತಗ್ಗು ಪ್ರದೇಶದಲ್ಲಿದೆ. ಎರಡೂ ಕೆರೆಗೂ ಕಾಡುಕಲ್ಲು ಕಟ್ಟಿಲಾಗಿದ್ದು, ಅಂಕರಿಕೆಗಳಿವೆ. ಮೇಲ್ಗಡೆ ಹಾಗೂ ಕಳೆಗಡೆ ಇರುವ ಕೆರೆ ಆಳವೆಷ್ಟು ಎಂದು ಇಂದಿಗೂ ಅಂದಾಜಿಸಲಾಗಿಲ್ಲ. ಮೇಲ್ಗಡೆ ಕೆರೆ ನೀರು ಕಂದು ಬಣ್ಣದಲ್ಲಿದ್ದರೆ, ಕಳೆಗಡೆ ಕೆರೆ ನೀರು ಶುದ್ಧ ಸ್ಪಟಿಕದಂತಿದೆ. ಎರಡೂ ಕೆರೆ ನಡುವೆ ಇರುವ ಸ್ಥಳದಲ್ಲಿ ದೇವಸ್ಥಾನ ಇತ್ತು ಎಂದು ಹೇಳಲಾಗುತ್ತಿದ್ದು, ಕಟ್ಟೆ ಇರುವುದರಿಂದ ದೇವಸ್ಥಾನ ಇತ್ತು ಎನ್ನೋದಕ್ಕೆ ಸಾಕ್ಷಿ ಸಿಗುತ್ತದೆ.ಇಷ್ಟೆಲ್ಲಾ ವೈಚಿತ್ರಗಳ ಒಡಲಲ್ಲಿಟ್ಟುಕೊಂಡ ಕೆರೆ ನೀರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಹರಿಯೋದಿಲ್ಲ. ಈ ಎರಡೂ ಕೆರೆಗಳ ತುದಿಯಲ್ಲಿ ಖಾಸಗಿ ವ್ಯಕ್ತಿ ತೋಡಿದ ಕೆರೆಗೂ ನೀರು ಹರಿಯೋದಿಲ್ಲ. ಎರಡು ಕೆರೆಯಲ್ಲಿ ನೀರು ಸಮೃದ್ಧವಾಗಿದ್ದರೂ ಖಾಸಗಿ ಕೆರೆಯಲ್ಲಿ ನೀರು ಕೆಳಮಟ್ಟದಲ್ಲಿದ್ದು, ಶುದ್ಧವಾಗಿಯೂ ಇಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಏಕೆ ಹರಿಯೋದಿಲ್ಲ ಎನ್ನೋದೇ ಸೋಜಿಗ.ಕೆರೆ ಒತ್ತುವರಿಯಾಗಿದೆ ಎಂಬ ಸ್ಥಳೀಯರ ಆರೋಪದ ಮೇರೆಗೆ ಮುದೂರಿಗೆ ದೌಡಾಯಿಸಿದ ವಿ೪ ಪ್ರತಿನಿಧಿ ಸ್ಥಳೀಯರ ಸಹಕಾರದಿಂದ ಅಲ್ಲಿರುವ ಗಿಡಗಂಟಿಗಳನ್ನೆಲ್ಲಾ ಕಡಿದು ಮೇಲ್ನೋಟಕ್ಕೆ ಪರಿಶೀಲಿಸಿದಾಗ ಕೆರೆಯಲ್ಲಿ ನಾಗನ ಕಲ್ಲೊಂದು ಪತ್ತೆಯಾಗಿದೆ. ಹಳಕಟ್ಟೆ ಕೆರೆಯಲ್ಲಿ ಸಿಕ್ಕ ನಾಗ ಶಿಲೆ ಕಲ್ಲು ಸುಮಾರು ಹನ್ನೆರಡನೇ ಶತಮಾನದ್ದಾಗಿದೆ ಎಂಬುವುದು ಇತಿಹಾಸ ಸಂಶೋಧಕ ಪ್ರೊ.ಮುರುಗೇಶ್ ತುರುವೇಕೆರೆ ಅಭಿಪ್ರಾಯಪಟ್ಟಿದಾರೆ. ಅದೇನೆ ಇರಲಿ ಕೆರೆ ಹಾಗೂ ಅಲ್ಲಿರುವ ಪ್ರಾಚೀನ ವಸ್ತುಗಳ ರಕ್ಷಣೆ ಆಗಬೇಕು. ಒತ್ತುವರಿ ಆಗಿದ್ದರೆ ತಕ್ಷಣ ಅದನ್ನು ನಿಲ್ಲಿಸಬೇಕು. ಖಾಸಗಿ ವ್ಯಕ್ತಿಗಳಿಗೆ ಹಕ್ಕುಪತ್ರ ಕೊಟ್ಟಿದ್ದರೆ ಅದನ್ನ ರದ್ದು ಮಾಡಬೇಕು. ಜನಪ್ರತಿನಿಧಿಗಳು ಹಾಗೂ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಹಳಕಟ್ಟೆ ಕೆರೆಕಡೆ ಗಮನಹರಿಬೇಕು ಎನ್ನುವುದು ಈ ಭಾಗದ ಜನರ ಒತ್ತಾಯ.ಕೆರೆ ಹಾಗೂ ದೇವಸ್ಥಾನ ಇರುವ ಪರಿಸರ ಸರ್ವೆ ನಂಬರ್ 26/2ರಲ್ಲಿ 23 ಎಕ್ರೆ ಜಾಗ ವಾಸು ಪಣಿಕ್ಕರ್ ಎಂಬವರ ಹೆಸರಲ್ಲಿದ್ದು, ಅದರಲ್ಲಿ ಒಂದು ಎಕ್ರೆ ಜಾಗ ಅವರು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಈಗಲೂ ಅವರ ಮಕ್ಕಳ ಹೆಸರಲ್ಲಿ ಜಾಗವಿದೆ. ನಮ್ಮ ಜಾಗ ಎನ್ನುವ ಖಾಸಗಿ ವ್ಯಕ್ತಿ ಹೇಳುವ ಸರ್ವೆ ನಂಬರ್ ಜಾಗ ಈ ಜಾಗದಿಂದ ಒಂದು ಮೈಲಿ ದೂರದಲ್ಲಿದ್ದು, ಈ ಜಾಗಕ್ಕೂ ಖಾಸಗಿ ವ್ಯಕ್ತಿ ಜಾಗಕ್ಕೂ ಸಂಬಂಧವಿಲ್ಲ. ಹಳಕಟ್ಟೆ ಕೆರೆಯಲ್ಲಿ ಹೇರಳ ನಿಧಿ ಇದೆ ಎಂಬ ನಂಬಿಕೆಯಲ್ಲಿ ಒತ್ತ್ತುವರಿಗೆ ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಸ್ಥಳೀಯರು ಪ್ರಭಲ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಳಕಟ್ಟೆ ಕೆರೆ ಹಾಗೂ ದೇವಸ್ಥಾನಕ್ಕೂ ಮುದೂರು ಶ್ರೀ ದೇವಿ ದೇವಸ್ಥಾನಕ್ಕೂ ಸಂಬಂಧವಿದ್ದು, ಜಾತ್ರೆ ಸಮಯದಲ್ಲಿ ಇಲ್ಲಿಂದ ಮೆರವಣಿಗೆ ನಡೆಯುತ್ತದೆ. ಸಂಪ್ರದಾಯಿಕ ಕಾವಡಿಗೂ ಇಲ್ಲಿಂದಲೇ ಮುನ್ನುಡಿ ಬರೆಯಲಾಗುತ್ತದೆ. ಸಂಪೂರ್ಣ ಜೀರ್ಣಾವಸ್ಥೆ ಕಂಡ ದೇವಸ್ಥಾನ ಅಭಿವೃದ್ಧಿ ಪಡಿಸುವ ಜತೆ ಕೆರೆ ಸಂರಕ್ಷಣ ಮೂಲಕ ಭಾವನಾತ್ಮಕ ಸಂಬಿಕೆ ಉಳಿಸುವ ಜತೆ ಕಾಡು ಪ್ರಾಣಿಗಳಿಗೂ ನೀರಿನ ಆಶ್ರಯ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.ಒಟ್ಟಿನಲ್ಲಿ ಕೆರೆ ಒತ್ತುವರಿಗೆ ಕೆರೆಯೊಳಗೆ ಅಪಾರ ನಿಧಿ ಇದೆ ಎಂಬ ಮಾಹಿತಿಯೇ ಕಾರಣ. ಅದೇನೆ ಇರಲಿ.. ಒಂದು ಕಡೆ ಕೆರೆ ಸಂಕ್ಷಣೆ ಹೆಸರಲ್ಲಿ ಸರ್ಕಾರ ಹತ್ತು ಹಲವು ಯೋಜನೆ ರೂಪಿಸಿ, ಕೋಟ್ಯಾಂತರ ರೂಪಾಯಿ ಹಣ ವಿನಿಯೋಗ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ನಿಧಿ ಆಸೆಗಾಗಿ 12ನೇ ಶತಮಾನದ ಹಳಕಟ್ಟೆ ಬೈಲು ಕೆರೆಯನ್ನು ಒತ್ತುವರಿ ಮಾಡುವ ಹುನ್ನಾರಕ್ಕೆ ಸಂಬಂಧಪಟ್ಟ ಇಲಾಖೆ ಬ್ರೇಕ್ ಹಾಕಬೇಕಿದೆ.

 

 

Related posts

Leave a Reply