Header Ads
Header Ads
Breaking News

ಮೂರನೇ ದಿನಕ್ಕೆ ಕಾಲಿಟ್ಟ ಕರವೇ ಅನಿರ್ಧಿಷ್ಟಾವಧಿ ಟೋಲ್ ವಿರುದ್ಧದ ಪ್ರತಿಭಟನೆಗೆ ಕಂಚಿನಡ್ಕ ಮುಸ್ಲಿಂ ಸಂಘಟನೆಗಳ ಬೆಂಬಲ.

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸುಂಕ ರಿಯಾಯಿತಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಪಡುಬಿದ್ರಿ ಟೆಂಪೋ ನಿಲ್ದಾಣ ಬಳಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿರಿಸಿದ್ದು, ಇಂದು ಕಂಚಿನಡ್ಕ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರೊಂದಿಗೆ ಸೇರಿಕೊಂಡಿದ್ದಾರೆ.
ಮುಸ್ಲಿಂ ಸಂಘಟನೆಯ ಪ್ರಮುಖರಾದ ರಜ್ಹಕ್ ಕಂಚಿನಡ್ಕ ಮಾತನಾಡಿ, ಕರಾವಳಿ ಭಾಗದ ಜನರಾದ ನಾವು ಶಾಂತಿ ಪ್ರೀಯರು.. ನಮ್ಮ ಈ ಒಳ್ಳೆತನವನ್ನು ನವಯುಗ್ ಕಂಪನಿ ದೌರ್ಬಲ್ಯ ಎಂದು ತಿಳಿಯುವುದು ಬೇಡ, ನಾವು ಯಾವತ್ತೂ ಟೋಲ್ ನೀಡುವುದಿಲ್ಲ ಎಂಬುದಾಗಿ ಹೇಳುತ್ತಿಲ್ಲ, ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಸುಂಕ ವಸೂಲಿ ನಡೆಸಿ ಅದು ಬಿಟ್ಟು, ಅದೇಷ್ಟೋ ವರ್ಷಗಳ ಹಿಂದೆ ಮುಗಿಯ ಬೇಕಾಗಿದ್ದ ಚತುಷ್ಪಥ ಕಾಮಗಾರಿಗೆ ಅಂತಿಮ ಸ್ಪರ್ಶ ದೊರಕಿಲ್ಲ, ಪಡುಬಿದ್ರಿ-ಎರ್ಮಾಳು ಪ್ರದೇಶದ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ, ಪಡುಬಿದ್ರಿ ಪೇಟೆ ಪ್ರದೇಶದ ಸರ್ವಿಸ್ ರಸ್ತೆಯ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರಿಗೆ ಸಹಿತ ವ್ಯಾಪಾರಿಗಳಿಗೆ ಧೂಳು ಸೇವನೆಯ ಭಾಗ್ಯ ಕರುಣಿಸಿದೆ, ಇದೇ ರೀತಿ ಮಹಾರಾಷ್ಟ್ರದಲ್ಲಿ ಕಾನೂನು ಬಾಹಿರವಾಗಿ ಟೋಲ್ ನಿರ್ಮಿಸಿ ಜನರಿಂದ ಸುಂಕ ವಸೂಲಿ ನಡೆಸುತ್ತಿದ್ದಂತೆ ಜನರೇ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಟೋಲ್‌ಗೇಟ್ ದ್ವಂಸಗೊಳಿಸಿದ್ದು ನಮ್ಮ ಕಣ್ಣಮುಂದಿದೆ. ಒಂದು ಕಡೆ ಈ ಭಾಗದ ಜನರಾದ ನಮಗೆ ಬುದ್ಧಿವಂತರೆಂಬ ಹಣೆಪಟ್ಟಿ, ಮತ್ತೊಂದು ಕಡೆ ಜನರ ಹಿತ ಕಾಪಾಡಲಾಗದ ಜನಪ್ರತಿನಿಧಿಗಳು.. ಈ ಎಲ್ಲದರ ಪ್ರಯೋಜನವನ್ನು ಎಲ್ಲಿಂದಲೋ ಬಂದ ಕಂಪನಿಗಳು ನಮ್ಮ ರಕ್ತ ಹೀರುವ ಮೂಲಕ ದುರುಪಯೋಗ ಪಡಿಸುತ್ತಿದೆ ಎಂದರು. ಈ ಸಂದರ್ಭ ಕರವೇ ಪ್ರಮುಖರಾದ ಅನ್ಸಾರ್ ಅಹಮ್ಮದ್, ಆಸೀಫ್ ಅಪತ್ತ್ ಭಾಂದವ, ಹಸನ್ ಕಂಚಿನಡ್ಕ, ಬುಡಾನ್ ಸಹೇಬ್ ಮುಂತಾದವರಿದ್ದರು.

Related posts

Leave a Reply