Header Ads
Header Ads
Breaking News

ಸಿದ್ದರಾಮಯ್ಯನವರಿಗೆ ಕೌಂಟ್‌ ಡೌನ್ ಪ್ರಾರಂಭವಾಗಿದೆ: ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ

ಸಿದ್ದರಾಮಯ್ಯನವರಿಗೆ ಕೌಂಟ್‌ ಡೌನ್  ಶುರುವಾಗಿದೆ. ಗಂಟೆಯ ಲೆಕ್ಕದಲ್ಲಿ ಕೌಂಟ್ಡೌನ್ ಪ್ರಾರಂಭವಾಗಿದೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ದುರಂಹಕಾರದ ಆಡಳಿತ ನಡೆಸುತ್ತಿದೆ. ರಾಜ್ಯದ ಜನ ಇದನ್ನು ಸಹಿಸುಕೊಳ್ಳುವುದಿಲ್ಲ.ಆದಷ್ಟು ಬೇಗ ಚುನಾವಣೆ ನಡೆಯಬೇಕು ಮೇ ಎರಡನೇ ವಾರದಲ್ಲಿಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದರು. ಇನ್ನು ವೀರಪ್ಪ ಮೊಯಿಲಿ ಟ್ವೀಟ್ ಬಗ್ಗೆ ಪ್ರತಿಕ್ರೀಯಿಸಿದ ಅವರು ಈ ಟ್ವೀಟ್ ರಾಜ್ಯ ಕಾಂಗ್ರೆಸ್ ನಿಜವಾದ ವ್ಯವಸ್ಥೆಯನ್ನು ತೋರಿಸುತ್ತಿದೆ .ಟಿಕೇಟ್ ಹಂಚಿಕೆಯಲ್ಲಿಯೂ ಮಾಫಿಯಾ ಶುರುವಾಗಿದೆ. ಇದನ್ನು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಹೈಕಮಾಂಡ್, ಸಿದ್ದರಾಮಯ್ಯನವರ ಒತ್ತಡಕ್ಕೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಉಡುಪಿ ಜಿಲ್ಲೆಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಶೋಭಾ ಯಾವ ಸಾಧನೆ ಹೇಳೋದಕ್ಕೆ ಇಲ್ಲಿಗೆ ಬರ್ತಾರೆ ಅಂತಾಗೊತ್ತಿಲ್ಲ ಎಂದು ಹೇಳಿದರು.

Related posts