Header Ads
Header Ads
Breaking News

ಉಡುಪಿ:25 ಸಾವಿರ ಹರಕೆಯ ಆಟಗಳು ಬುಕ್ಕಿಂಗ್ .30 ವರ್ಷಕ್ಕೆ ಆಗುವಷ್ಟು ನಿರಂತರ ಕಲಾ ಸೇವೆ.ಮಂದರ್ತಿ ಯಕ್ಷಗಾನ ಮೇಳ ದಾಖಲೆ.

 ಐದು ಮೇಳ, ೨೦೦ ಕಲಾವಿದರು, ೩೦ ವರ್ಷಕ್ಕೆ ಆಗುವಷ್ಟು ಹರಕೆ ಆಟ ಬುಕ್ಕಿಂಗ್ಇದು ದಾಖಲೆ ಸೃಷ್ಟಿಸಿದ ಉಡುಪಿ ಜಿಲ್ಲೆಯ ಮಂದಾರ್ತಿ ಯಕ್ಷಗಾನ ಮೇಳದ ಕಥೆ. ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ 25ಸಾವಿರ ಹರಕೆಯ ಆಟ ಬುಕ್ಕಿಂಗ್ ಇದೇ ಮೊದಲು..ಇದರ ಬಗ್ಗೆ ವರದಿ ಇಲ್ಲಿದೆ. ಗಂಡು ಕಲೆ ಯಕ್ಷಗಾನ ಉಡುಪಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಉಡುಪಿಯಲ್ಲಿರುವ ಅದೆಷ್ಟೋ ಇರುವ ಯಕ್ಷಗಾನ ಮೇಳಗಳು ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಯಕ್ಷಗಾನದ ಮೆರುಗನ್ನ ಹೆಚ್ಚಿಸಿದೆ. ಅದರಲ್ಲೂ ಉಡುಪಿಯಲ್ಲಿ ಕೆಲವೊಂದು ಪ್ರಸಿದ್ದ ಮೇಳಗಳಿಗೆ ಭಾರೀ ಬೇಡಿಕೆ ಇದೆ. ಮಳೆಗಾಳ ಬಂತೆಂದರೆ ಯಕ್ಷಗಾನ ಆಟಗಳು ನಡೆಯುವುದಿಲ್ಲ. ಕಲಾವಿದರಿಗೆ ಕೆಲಸ ಇರೋದಿಲ್ಲ. ಆದ್ರೆ ಮಂದಾರ್ತಿಯ ದುರ್ಗಾಪರಮೇಶ್ವರಿ ಮೇಳ ಮಾತ್ರ ಹಾಗಲ್ಲ. ಇಲ್ಲಿನ ಕಲಾವಿದರಿಗೆ ಕೆಲಸ ಇಲ್ಲ, ಯಕ್ಷಗಾನ ಆಟ ಇಲ್ಲ ಎನ್ನುವ ಭಯ ಇಲ್ಲ ಯಾಕೆಂದ್ರೆ ಮುಂದಿನ 30 ವರ್ಷಕ್ಕೆ ಬೇಕಾಗುವಷ್ಟು ಹರಕೆಯ ಆಟಗಳು ಬುಕ್ಕಿಂಗ್ ಆಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 60ಕ್ಕೂ ಅಧಿಕ ಯಕ್ಷಗಾನ ಮೇಳಗಳಿವೆ. ಸುಮಾರು 40ಕ್ಕೂ ಅಧಿಕ ವೃತ್ತಿಪರ ಮೇಳಗಳಿವೆ.ಯಕ್ಷಗಾನ ಮೇಳಗಲಲ್ಲಿ ಬಹುತೇಕ ಆರಾಧನಾ ಕಲಾ ರೂಪದ ಹರಕೆ ಪ್ರದರ್ಶನಗಳು ನಡೆಯುತ್ತದೆ. ದ.ಕ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ 6 ಮೇಳಗಳನ್ನು ಹೊಂದಿದ್ದರೆ. ಉಡುಪಿ ಜಿಲ್ಲೆಯ ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಐದು ಮೇಳಗಳನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಹರಕೆ ಆಟಗಳು ಹೆಚ್ಚುತ್ತಿರುವ ಕಾರಣ ಮಂದರ್ತಿ ಮೇಳಕ್ಕೆ ಮುಂದಿನ ೩೦ ವರ್ಷಕ್ಕೆ ಆಗುವಷ್ಟು ಯಕ್ಷಗಾನ ಸೇವೆ ಬುಕ್ ಆಗಿದೆ. ಪ್ರತೀ ಬಿತ್ಯ ಐದು ಸೇವೆಯ ಆಟಗಳು ನಡೆದರೆ ತಿಂಗಳಿಗೆ 150 ಪ್ರದರ್ಶನಗಳು ನಡೆಯುತ್ತದೆ. ಒಂದು ವರ್ಷದಲ್ಲಿ ಸುಮಾರು ೯೦೦ ಪ್ರದರ್ಶನ ನಡೆಯುತ್ತದೆ.ಈಗಾಗಲೇ 25000 ಬುಕ್ ಆಗಿರುವ ಹರಕೆ ಆಟಗಳಿಗೆ ಇನ್ನೂ30 ವರ್ಷ ಬೇಕಾಗಿರೋದರಿಂದ ದೇವಸ್ಥಾನದ ಆಡಳಿತ ಮಂಡಳಿ ಮಳೆಗಾಳದ ಪ್ರದರ್ಶನ ಆರಂಭಿಸಿದೆ.ಭಕ್ತರಿಗೆ ಅನುವು ಮಾಡಿಕೊಟ್ಟಿದೆ. ರಂಗದಲ್ಲಿರುವ ಕಲಾವಿದ ಪ್ರೇಕ್ಷಕರನ್ನು ಮನರಂಜನೆಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಆದರೆ ನಿಜ ಜೀವನದಲ್ಲಿ ಕಲಾವಿದನ ಬದುಕು ನಿರ್ವಹಣೆ ಕಷ್ಟ. ಈ ರೀತಿಯ ಬದಲಾವಣೆಯ ಮೂಲಕ ಭಕ್ತರಿಗೆ ಮತ್ತು ಕಲಾವಿದರಿಗೆ ಅನುಕೂಲವಾಗಿದೆ.ಇಷ್ಟೋಂದು ಪ್ರಮಾಣದಲ್ಲಿ ಕಲಾ ಸೇವೆ ಪ್ರಪಂಚಯ ಯಾವ ಭಾಗದಲ್ಲೂ ನಡೆಯೋದಿಲ್ಲ. ಇದಕ್ಕೆ ಕಲೆಯ ಮೇಲೆ ಇರುವ ಜನರ ಭಕ್ತಿ-ಪ್ರೀತಿಯೇ ಕಾರಣವಾಗಿದೆ.

Related posts

Leave a Reply