Header Ads
Header Ads
Breaking News

ಉಡುಪಿ:32 ಕೋಟಿ ವೆಚ್ಚದಲ್ಲಿ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ

 ಪೊಡವಿಗೊಡೆಯ ಅಲಂಕಾರ ಪ್ರಿಯ ಉಡುಪಿಯ ಶ್ರೀ ಕೃಷ್ಣನಿಗೆ ಇನ್ನೊಂದು ವೈಭವದ ಸೇವೆ ಸಮರ್ಪಣೆಯಾಗಲಿದೆ. ಸುಮಾರು 32 ಕೋಟಿ ವೆಚ್ಚದಲ್ಲಿ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಈ ಸೇವೆಯಲ್ಲಿ ದೇಶ ವಿದೇಶದ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.ಭಗವಂತನ ಸಾನ್ನಿಧ್ಯದಲ್ಲಿ ಚಿನ್ನ ವಜ್ರ ವೈಢೂರ್ಯವನ್ನು ಸಮರ್ಪಿಸಿ ತನ್ಮೂಲಕ ಸೇವೆ ಸಲ್ಲಿಸುವುದು ಸಂಪ್ರದಾಯ. ಅಷ್ಠ ಮಠದ ಯತಿವರೇಣ್ಯರಿಂದ ಪೂಜಿಸ್ಪಡುವ ಶ್ರೀ ಕೃಷ್ಣ ಅಲಂಕಾರ ಪ್ರಿಯ. ಎರಡು ವರ್ಷಕ್ಕೊಮ್ಮೆ ಬದಲಾಗುವ ಪರ್ಯಾಯ ಪೀಠದಲ್ಲಿ ವಿರಾಜಮಾನರಾಗುವ ಸ್ವಾಮೀಜಿ ತನ್ನ ಅವಧಿಯಲ್ಲಿ ವಿಶೇಷವಾದ ಸೇವೆಯನ್ನು ಕೃಷ್ಣನಿಗೆ ಅರ್ಪಿಸುತ್ತಾರೆ. ಅಂತೆಯೇ ಪ್ರಸಕ್ತ ಪರ್ಯಾಯ ಪೀಠಾಧಿಪತಿಗಳಾದ ಫಲಿಮಾರು ವಿದ್ಯಾಧೀಶ ತೀರ್ಥರು ಕೃಷ್ಣನ ಗರ್ಭ ಗುಡಿಗೆ ಚಿನ್ನದ ಹೊದಿಕೆಯನ್ನು ಸಮರ್ಪಿಸಲು ಚಿಂತನೆ ನಡೆಸಿದ್ದಾರೆ. ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಚಿನ್ನದ ಹೊದಿಕೆ ಸಮರ್ಪಣೆ ಬಗ್ಗೆ ಘೋಷಿಸಿದ್ದರು. ಸದ್ಯ ಸುಮಾರು 11 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನೂ 20 ಕೋಟಿಗೂ ಅಧಿಕ ಹಣದ ಅವಶ್ಯಕತೆ ಇದ್ದು ಭಕ್ತರು ಯೋಜನೆ ಪೂರ್ಣಗೊಳಿಸುತ್ತಾರೆ ಎಂದು ಸ್ವಾಮೀಜಿ ಆಶಯ ಹೊಂದಿದ್ದಾರೆ

ವಿದ್ಯಾದೀಶ ತೀರ್ಥ ಸ್ವಾಮೀಜಿ: ಕೃಷ್ಣನ ಗರ್ಭಗುಡಿಗೆ ಹೊದಿಸಲಾಗುವ ಚಿನ್ನದ ಹೊದಿಕೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಕೃಷ್ಣನ ಸ್ವರ್ಣಗೋಪುರ .ಸು ವರ್ಣ ಗೋಪುರವಾಗಿಯೂ ಕಂಗೊಳಿಸಲಿದೆ. ಮೂಲ ದಲ್ಲಿ ತಾಮ್ರದ ಹಾಳಗಳು ಅದರ ಮೇಲೆ ಆ ಮೇಲೆ ಬೆಳ್ಳಿ ಯ ಹೊದಿಕೆ ಅದರ ಮೇಲೆ ಚಿನ್ನದ ಹಾಳೆಗಳನ್ನು ಎರಕದ ಮೂಲಕ ಜೋಡಿಸಲಾಗುತ್ತದೆ. ಮೂಲದಲ್ಲಿರುವ ತಾಮ್ರದ ಹಾಳೆಯಲ್ಲಿ ವೇದ ಮಂತ್ರಗಳನ್ನು ಕೆತ್ತಲಾಗುತ್ತದೆ. ಅದ್ರ ಜೊತೆ 21600 ಹಂಸ ಮಂತ್ರವನ್ನು ಬರೆಯಲಾಗುತ್ತದೆ. ಈ ಮೂಲಕವಾಗಿ ದೇವರ ಗರ್ಭ ಗುಡಿಗೆ ಒಂದು ಸುತ್ತು ಹಾಕಿದಾಗ ಭಕ್ತನ ಪಾಪ ಕರ್ಮಗಳು ಪರಿಹಾರವಾಗುತ್ತದೆ. ಭಗವಂತನನ್ನು ನವ ಕಿಂಡಿಗಳ ಮೂಲಕ ನೋಡಿವುದು ಉಡುಪಿಯ ಸಂಪ್ರದಾಯ. ಅಂತೆಯೇ ನಮ್ಮ ಹೃದಯ ಮಂದಿರದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿ ನಮ್ಮ ದೇಹದ ನವ ಭಾಗದ ಮೂಲಕ ದೇವರನ್ನು ಕಾಣಬೇಕು ಎಂಬುದು ಈ ಸ್ವರ್ಣಗೋಪುರ ಸೇವೆಯ ಉದ್ದೇಶವಾಗಿದೆ. ಇದರ ಉಸ್ತುವಾರಿಯನ್ನು ದೈವಜ್ನ ಸಮಾಜದ ವೆಂಕಟೇಶ ಅವರು ನೋಡಿಕೊಳ್ಳುತ್ತಿದ್ದು .ಚಿನ್ನದ ಕುಸುರಿ ಕೆಲಸವನ್ನು ವಿಶ್ವ ಕರ್ಮ ಸಮಾಜದವರು ನೋಡಿಕೊಳ್ಳಲಿದ್ದಾರೆ. ಮುಂದಿನ 4 ತಿಂಗಳಲ್ಲಿ ಸುವರ್ಣಗೋಪುರದ ಕೆಲಸ ಮುಕ್ತಾಯವಾಗಲಿದೆ.ವೆಂಕಟೇಶ್ ( ಚಿನ್ನದ ಹೊದಿಕೆಯ ಉಸ್ತುವಾರಿ):ಭಗವಂತ ನಮಗೆ ನೀಡಿದ್ದನ್ನು ಮರಳಿ ಭಗವಂತನಿಗೆ ಸಮರ್ಪಿಸಬೇಕು. ಕೆರೆಯ ನೀರನು ಕೆರೆಗೆಚೆಲ್ಲಿ ಎಂಬ ದಾಸರ ಗೀತೆಗೆ ಅನುಗುಣವಾಗಿ ಸುವರ್ಣಗೋಪುರ ಸೇವೆ ಸಂಪನ್ನವಾಗಲಿದೆ.

Related posts

Leave a Reply