Header Ads
Breaking News

ಉತ್ತರಪ್ರದೇಶ ಘಟನೆ ಒಂದು ವ್ಯವಸ್ಥಿತ ಷಡ್ಯಂತ್ರ : ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

ಉತ್ತರಪ್ರದೇಶ ಘಟನೆ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಸರಕಾರಕ್ಕೆ ಮುಜುಗರ ಮಾಡುವ ಷಡ್ಯಂತ್ರ. ಇದರ ಹಿಂದೆ ಪಿಎಫ್‍ಐ ಮತ್ತು ಎಸ್ಡಿಪಿಐ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಾನು ಹೇಳುವುದಿಲ್ಲ. ಈ ಎರಡು ಸಂಘಟನೆಗಳು ವ್ಯವಸ್ಥಿತ ಜಾಲ ಹೆಣೆದಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಬಗ್ಗೆ ಸಮಗ್ರವಾದ ತನಿಖೆಯಾಗಲಿ, ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ. ಅತ್ಯಾಚಾರ ಮಾಡಿದವರಿಗೆ ಹಿಂದೂ-ಮುಸ್ಲಿಂ-ಕ್ರೈಸ್ತ ಅನ್ನುವಂಥ ಬೇದ ಇಲ್ಲ. ಇದೊಂದು ಮಾನಸಿಕತೆ ಪಿಎಫ್‍ಐ ಎಸ್ಡಿಪಿಐ ಕುಮ್ಮಕ್ಕು ಇದೆ ಅಂತಾದರೆ ಎನ್‍ಐಎ ಯಿಂದ ತನಿಖೆಯಾಗಬೇಕು. ಎರಡು ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಭವಿಷ್ಯದ ದಿನಗಳಲ್ಲಿ ಈ ಸಂಘಟನೆಗಳು ನಿಷೇಧ ಆಗುತ್ತದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *