Header Ads
Header Ads
Breaking News

ಉತ್ತರ ಪ್ರದೇಶದ ಅಂಚಲ್ ಚಾರಿಟೇಬಲ್ ಟ್ರಸ್ಟ್‌ಗೆ ಭೇಟಿ ನೀಡಿದ ಲಾಲ್ ಗೋಯಲ್ : ಪರಾಸ್ ಧಾಮ್ ವೈಶಾಲಿಯಲ್ಲಿ ಅಂಗಾಂಗ ಜಾಗೃತಿ ಕಾರ್ಯಕ್ರಮ

ಉತ್ತರ ಪ್ರದೇಶದ ಘಜಿಯಾಬಾದ್‌ನ ಅಂಚಲ್ ಚಾರಿಟೇಬಲ್ ಟ್ರಸ್ಟ್ ಪರಾಸ್ ಧಾಮ್ ವೈಶಾಲಿಯಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆರ್ಗನ್ ಡೊನೇಷನ್ ಇಂಡಿಯಾ ಫೌಂಡೇಶನ್ ಚೇರ್‌ಮೆನ್ ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾ ಇದರ ಮುಖ್ಯ ಪ್ರವರ್ತಕ ಲಾಲ್ ಗೋಯೆಲ್ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಅಂಚಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ್ ಶೀಲ್ ಗೋಯೆಲ್ ಅವರನ್ನು ಸ್ವಾಗತಿಸಿದ್ರು ಬಳಿಕ ಟ್ರಸ್ಟನ ಚಟುವಟಿಕೆಗಳ ವಿವರಗಳನ್ನು ನೀಡಿದ್ರು. ಇದೇ ವೇಳೆ ಮಾತನಾಡಿದ ಲಾಲ್ ಗೋಯೆಲ್‌ರವರು ಭಾರತದಲ್ಲಿ ಅಂಗಾಂಗ ದಾನದ ಪರಿಸ್ಥಿತಿಯನ್ನು ವಿವರಿಸಿ, ಅಂಗಾಂಗ ದಾನ ಜಾಗೃತಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡುವಂತೆ ಸಭಿಕರಲ್ಲಿ ಮನವಿ ಮಾಡಿಕೊಂಡರು. ನಂತರ ಅಂಚಲ್ ಚಾರಿಟೇಬಲ್ ಟ್ರಸ್ಟ್ ಮಾಡಿದ ಕಾರ್ಯಗಳನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪರಾಸ್ ಧಾಮ್‌ನ ಕಾರ್ಯದರ್ಶಿ ಜೆ ಕೆ ಜೈನ್, ಮಧು ಜೈನ್, ರಜನಿ ಗೋಯೆಲ್, ಅಲೋಕ್ ದಡ್ಚಿ, ಟಂಡನ್, ಮನೋಜ್ ಜೈನ್ ಮತ್ತು ಸತೀಶ್ ಜೈನ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *