Header Ads
Breaking News

ಉತ್ತರ ಪ್ರದೇಶದ ಅತ್ಯಾಚಾರ ಕೊಲೆ ಪ್ರಕರಣ : ಡಿವೈಎಫ್‍ಐ, ದಲಿತ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ

ಉತ್ತರ ಪ್ರದೇಶದ ಅತ್ರಾಸ್‍ನಲ್ಲಿ ದಲಿತ ಹೆಣ್ಣು ಮಗಳ ಅತ್ಯಾಚಾರ ಕೊಲೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಒತ್ತಾಯಿಸಿ ಡಿವೈಎಫ್‍ಐ ಉರ್ವ ಸ್ಟೋರ್ ಘಟಕ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿ ಉರ್ವ ಸ್ಟೋರ್ ಘಟಕ ದರ ವತಿಯಿಂದ ಉರ್ವ ಸ್ಟೋರ್ ಜಂಕ್ಷನ್‍ನಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋμï ಬಜಾಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‍ಐ ಉರ್ವ ಸ್ಟೋರ್ ಘಟಕದ ಅಧ್ಯಕ್ಷರಾದ ಪ್ರಶಾಂತ್ ಎಂಬಿ, ಮನೋಜ್, ಸುಖೇಶ್, ಸುಧಾಕರ್, ಹರೀಶ್ ಹರಿಣಾಕ್ಷಿ, ಕಾರ್ಮಿಕ ಮುಖಂಡರಾದ ಅಶೋಕ್ ಶ್ರೀಯಾನ್ ಸ್ಯಾಮುವೆಲ್ ಟೈಟಸ್, ದಿನೇಶ್, ವಾಮನ್, ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರುಗಳಾದ ರಘುವೀರ್, ಕೃಷ್ಣ ತಣ್ಣೀರುಬಾವಿ, ಎಸ್‍ಎಫ್‍ಐ ಮುಖಂಡರಾದ ಸಾಗರ್, ರಕ್ಷಿತ್ ಮುಂತಾದವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *