Header Ads
Header Ads
Breaking News

ಉತ್ತರ ಪ್ರದೇಶ ಬಿಜೆಪಿ ಸರಕಾರ, ಎರಡು ತಿಂಗಳಲ್ಲಿ 803 ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದ ಎರಡು ತಿಂಗಳ ಅವಧಿಯಲ್ಲಿ ೮೦೩ ಅತ್ಯಾಚಾರ ಪ್ರಕರಣಗಳು ನಡೆದಿವೆ.
ವಿಧಾನಸಭೆಯಲ್ಲಿ ಮಂಗಳವಾರ, ಉತ್ತರಪ್ರದೇಶದಲ್ಲಿ ಮಾರ್ಚ್ ೧೫ರಿಂದ ಮೇ ೯ರ ನಡುವೆ ನಡೆದ ಅಪರಾಧ ಪ್ರಕರಣಗಳ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ, ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರ ಬದ್ಧವಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ?ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸಮಾಜವಾದಿ ಪಕ್ಷದ ಶಾಸಕ ಶೈಲೇಂದ್ರ ಯಾದವ್ ಲಾಲೈ, ಅಪರಾಧ ಪ್ರಕರಣಗಳ ವಿವರ ಮತ್ತು ನಿಯಂತ್ರಣಕ್ಕೆ ಕೈಗೊಂಡ ವಿವರಗಳನ್ನು ಕೇಳಿದ್ದರು. ಸಮಾಜವಾದಿ ಪಕ್ಷದ ಪರಸ್ನಾಥ ಯಾದವ್ ಹಿಂದಿನ ವರ್ಷಗಳಲ್ಲಿ ನಡೆದಿರುವ ಅಪರಾಧಗಳಿಗೆ ಹೋಲಿಕೆ ಮಾಡಿರುವ ವಿವರ ನೀಡಿ ಎಂದು ಕೋರಿದರು. ಆದರೆ, ಸಚಿವರ ಬಳಿ ಮಾಹಿತಿ ಲಭ್ಯವಿರಲಿಲ್ಲ.
ಸಚಿವರ ಉತ್ತರದಿಂದ ಅಸಮಾಧಾನಗೊಂಡ ವಿರೋಧ ಪಕ್ಷದ ನಾಯಕ ರಾಮ್ ಗೋವಿಂದ ಚೌಧರಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪಕ್ಷದ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಶಾಸಕರು ಸಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಸಭಾತ್ಯಾಗ ಮಾಡಿದರು. ಮಾರ್ಚ್ ೧೫ರಿಂದ ಮೇ ೯ರ ನಡುವೆ ದಾಖಲಾದ ಪ್ರಕರಣಗಳು * ೭೨೯ ಕೊಲೆ, * ೭೯೯ ಲೂಟಿ, * ೨೬೮೨ ಅಪಹರಣ, * ೬೦ ಡಕಾಯಿತಿ,

Related posts

Leave a Reply