Header Ads
Breaking News

ಉದ್ಯಮಿಯ ಮೇಲೆ ತಲವಾರು ದಾಳಿ

ಉದ್ಯಮಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ ರಾತ್ರಿ ನಡೆದಿದೆ. ಕಂದಾವರ ಕೈಕಂಬದ ಅಬ್ದುಲ್ ಅಝೀಝ್, ದಾಳಿಗೊಳಗಾದ ಉದ್ಯಮಿ. ಇವರು ರಾತ್ರಿ ಸುಮಾರು 10.30ಕ್ಕೆ ಮಸೀದಿಯಲ್ಲಿ ನಮಾಝ್ ಮಾಡಿ ಮನೆಗೆ ಮರಳಲು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ಬರು ಯುವಕರು ತಲವಾರಿನಿಂದ ತಲೆ, ಕೈ, ಕಾಲಿಗೆ ಕಡಿದು, ಗಂಭೀರ ಗಾಯಗೊಳಿಸಿ, ಪರಾರಿಯಾಗಿದ್ದಾರೆ. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಗಾಯಗೊಂಡ ಅಝೀಝ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ವೆನ್ಝ್ ಬಟ್ಟೆಬರೆ ಅಂಗಡಿ ಹೊಂದಿರುವ ಅಝೀಝ್ ಕಂದಾವರ ಮಸೀದಿಯ ಆಡಳಿತ ಕಮಿಟಿಯಲ್ಲೂ ಸಕ್ರಿಯರಾಗಿದ್ದರು. ಪ್ರಕರಣ ದಾಖಲಿಸಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *