Header Ads
Header Ads
Breaking News

ಉದ್ಯಮಿ ತಾಯಿ ನೇಣು ಬಿಗಿದು ಆತ್ಮಹತ್ಯೆ ಪುತ್ತೂರು ನಗರದ ಬಪ್ಪಳಿಗೆಯಲ್ಲಿ ಘಟನೆ

ವೃದ್ದೆಯೊಬ್ಬರು ತಮ್ಮ ವಾಸದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಬಪ್ಪಳಿಗೆ ಎಂಬಲ್ಲಿ ಸೋಮವಾರರಾತ್ರಿ ನಡೆದಿದ್ದು, ಈ ಘಟನೆ ಮಂಗಳವಾರ ಬೆಳಿಗ್ಗೆ ಮನೆಮಂದಿಯ ಗಮನಕ್ಕೆ ಬಂದಿದೆ. ಪುತ್ತೂರು ಬೊಳುವಾರು ಸಮೀಪದ ದೀಪಾ ಕಾಂಪ್ಲೆಕ್ಸ್‌ನಲ್ಲಿರುವ ‘ಶಿಲ್ಪಾ ಅಟೋ ಗ್ಯಾಸ್’ ಸಂಸ್ಥೆಯ ಮಾಲಕ ಉಮಾನಾಥ್ ಅವರ ತಾಯಿ ಗಿರಿಜಾ (75) ಆತ್ಮಹತ್ಯೆ ಮಾಡಿಕೊಂಡವರು. ಕೆಎಸ್ಸಾರ್ಟಿಸಿ ನಿವೃತ್ತ ಚಾಲಕ ಬಾಬು.ಎಸ್. ಅವರ ಪತ್ನಿಯಾಗಿದ್ದ ಗಿರಿಜಾ ಅವರು ಪುತ್ರ ಉಮಾನಾಥ್ ಅವರ ಜೊತೆ ಬಪ್ಪಳಿಗೆಯಲ್ಲಿ ವಾಸವಾಗಿದ್ದರು. ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಮನೆಯ ಕೆಳ ಅಂತಸ್ತಿನ ಕೋಣೆಯೊಂದರ ಕಿಟಿಕಿಗೆ ಬೈರಾಸ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಮಂಗಳವಾರ ಬೆಳಿಗ್ಗೆ ಮನೆ ಮಂದಿಯ ಗಮನಕ್ಕೆ ಬಂದಿದೆ. ಉಮಾನಾಥ್ ಅವರು ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಎರಡು ತಿಂಗಳ ಹಿಂದೆಯಷ್ಟೇ ನಡೆದಿತ್ತು. ಇದೀಗ ಅವರ ತಾಯಿ ಈ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply