Header Ads
Header Ads
Breaking News

ಉದ್ಯಾವರದಲ್ಲಿ ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ, ದೂರು ನೀಡಿದರೂ ಕ್ಯಾರೇ ಅನ್ನದ ಅಧಿಕಾರಿಗಳು

ಮಂಜೇಶ್ವರ ಉದ್ಯಾವರ ೧೦ನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವರ್ಷಗಳಿಂದೀಚೆಗೆ ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್ ಕಂಬವೊಂದು ಇದ್ದರೂ ಯಾರೂ ಗಮನಿಸುತ್ತಿಲ್ಲ.
ಸ್ಥಳೀಯರು ಈ ಬಗ್ಗೆ ಹಲವಾರು ಸಲ ವಿದ್ಯುತ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕಣ್ಣಿದ್ದೂ ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳ ವಿರುದ್ಧ ವ್ಯಾಪಕವಾಗಿ ಪತ್ರಿಕೆ ಹಾಗು ದೃಶ್ಯಮಾದ್ಯಮಗಳಲ್ಲಿ ಪ್ರಕಟಗೊಂಡರೂ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತುಗೊಳ್ಳದೇ ಇರುವುದರಿಂದ ಮಂಜೇಶ್ವರ ಗ್ರಾಹಕರ ವೇದಿಕೆ ಸಂಬಂಧಪಟ್ಟ, ಅಧಿಕಾರಿಗಳು ಹಾಗು ಸಚಿವರಿಗೆ ೧,೦೦೦ ಅಂಚೆ ಕಾರ್ಡು ಕಳಿಸುವ ಮೂಲಕ ಅಂಚೆಕಾರ್ಡು ಚಳವಳಿಯೊಂದಿಗೆ ಮೊದಲ ಹಂತದ ಪ್ರತಿಭಟನೆಗೆ ಸಜ್ಜಾಗಿರುವುದಾಗಿ ಮಂಜೇಶ್ವರ ಗ್ರಾಹಕರ ವೇದಿಕೆಯವರು ತಿಳಿಸಿದ್ದಾರೆ.
ಈ ಬಗ್ಗೆ ಮಂಜೇಶ್ವರ ಗ್ರಾಹಕರ ವೇದಿಕೆ ಕಾರ್ಯದರ್ಶಿ ಕಾಸರಗೋಡು ವಲಯ ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಸಮೀಪದ ಎನ್ ಎಚ್ ೧೭೩/೧ ಸಂಖ್ಯೆಯ ವಿದ್ಯುತ್ ಕಂಬ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿ ಇರುವ ಬಗ್ಗೆ ಚ್ಯಾನೆಲ್ ವಿಸ್ತೃತ ವರದಿ ನೀಡಿದ್ದವು. ಇಷ್ಟೆಲ್ಲಾ ಆಗಿ ಕೂಡಾ ಮಂಜೇಶ್ವರ ಅಸಿಸ್ಟಂಟ್ ಇಂಜಿನಿಯರ್ ಯಾವುದೇ ಅನಾಹುತವಿಲ್ಲವೆಂಬುದಾಗಿಯೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸುವಾಗ ಅದರ ಜತೆಯಾಗಿ ಹೊಸ ಕಂಬವನ್ನು ಸ್ಥಾಪಿಸಬಹುದಾಗಿಯೂ ಉದಾಸೀನತೆಯ ವರದಿ ಮೇಲಾಧಿಕಾರಿಗಳಿಗೆ ನೀಡಿರುವುದಾಗಿ ಗ್ರಾಹಕರ ವೇದಿಕೆ ಆರೋಪಿಸಿದೆ.

Related posts

Leave a Reply