Header Ads
Header Ads
Header Ads
Breaking News

ಉದ್ಯಾವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸಮಾವೇಶಕ್ಕೆ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಚಾಲನೆ

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳುವುದಕ್ಕೆ ಮೋದಿಯ ಹೆಸರು ಬಳಕೆ ಮಾಡಲು ಸಾಧ್ಯವಾಗಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅದೂ ಕೂಡಾ ಅಸಾಧ್ಯವಾಗಿದೆ, ಕಾರಣ ಮೋದಿಯ ಮುಖವಾಡ ಕೂಡಾ ಕಳಚಿ ಬಿದ್ದಿದ್ದು, ಅದೇಷ್ಟೋ ಲಕ್ಷಾಂತರ ಮಂದಿಯಿಂದ ಬ್ಯಾಂಕಿನಲ್ಲಿ ಖಾತೆ ತೆರೆಯಿರಿ ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಹಾಕಲಿದ್ದೇವೆ ಎಂಬ ಸುಳ್ಳಿನೊಂದಿಗೆ ಆಢಳಿತ ನಡೆಸಲು ಆರಂಭಿಸಿದ ಅವರು ನಿರಂತರವಾಗಿ ಅದನ್ನೇ ಮಾಡುತ್ತಿದ್ದಾರೆ ಎಂಬುದಾಗಿ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಅವರು ಉದ್ಯಾವರದ ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಆಢಳಿತಾವಧಿಯಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರನ್ನು ಮೇಲೆತ್ತುವ ಕೆಲಸ ಮಾಡಿದರೆ, ಇದೀಗ ಅದೇ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಲೆ ಬುಡಗಳಿಲ್ಲದ್ದ ಕೆಲವೊಂದು ಯೋಜನೆಗಳಿಂದ ಬಡವರನ್ನು ಮತ್ತಷ್ಟು ಬಡಪಾಯಿಗಳನ್ನಾಗಿ ಮಾಡುತ್ತಿದೆ. ರಾಜ್ಯದ ಬಗ್ಗೆ ಜನರಿಗೆ ಗೊತ್ತೇ ಮುಖ್ಯಮಂತ್ರಿಯೋರ್ವ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದ ದಾಖಲೆಯೊಂದಿದ್ದರೆ ಅದು ಯಡಿಯೂರಪ್ಪ, ಅಂಥವರ ಕೈಯಲ್ಲಿ ಇದೀಗ ಬಿಜೆಪಿ ಪಕ್ಷದ ರಾಜ್ಯದ ಹೊಣೆ ನೀಡಲಾಗಿದೆ. ಜನರು ಮೂರ್ಖರಲ್ಲ ಆಢಳಿತಾವಾಧಿಯಲ್ಲಿ ಬಿಜೆಪಿಗರು ಏನೆಲ್ಲ ಅನಾಚಾರಗಳನ್ನು ಮಾಡಿದ್ದಾರೆ ಎಂಬುದನ್ನು ಜನ ಮರೆತ್ತಿಲ್ಲ ಎಂದರು. ಸಭಾಂಗಣ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದು, ಹೊರಗಡೆ ನಾಯಕರ ಬಾಷಣ ಆಲಿಸಲು ಎಲ್‌ಇಡಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆಸ್ಕರ್ ಪೆರ್ನಾಡೀಸ್, ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಗೋಪಾಲ್ ಭಂಡಾರಿ, ದಿವಾಕರ್ ಶೆಟ್ಟಿ, ಎಂ.ಎ. ಗಪೂರ್ ಮುಂತಾದವರಿದ್ದರು.
ಸುರೇಶ್ ಏರ್ಮಾಳ್

Related posts

Leave a Reply