Header Ads
Header Ads
Breaking News

ಉದ್ಯಾವರದಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ..

ಕೊಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ ಇವರ ೧೩ನೇ ರಾಜ್ಯ ಮಟ್ಟದ ಕರಾಟೇ ಚಾಂಪಿಯನ್ ಶಿಪ್-2019 ಉದ್ಯಾವರ ಗ್ರಾಮ ಪಂಚಾಯಿತಿ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದ್ದು, ಈ ಸ್ಪರ್ಧಾ ಕೂಟಕ್ಕೆ ರಾಜ್ಯದ ಹತ್ತಕ್ಕೂ ಅಧಿಕ ಜಿಲ್ಲೆಗಳಿಂದ ಸಹಸ್ರಾರು ಕರಾಟೆ ಪಟುಗಳು ಪಾಲ್ಗೊಂಡಿದ್ದರು ಎಂಬುದಾಗಿ ಕರಾಟೆ ಬುಡೋಕಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಬೊಳ್ಜೆ ಹೇಳಿದ್ದಾರೆ.

ಉದ್ಯಾವರ ಗ್ರಾಮ ಪಂಚಾಯಿತಿ ಕ್ರೀಢಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ ಕರಾಟೆ ಪಟುಗಳಿಗೆ, ಊಟ ವಸತಿ ಉಚಿತವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ, ಈ ಸ್ಪರ್ಧಾ ಕೂಟದಲ್ಲಿ ವಲ್ಡ್ ಕರಾಟೆ ಫೆಡರೇಶನ್ ನೀತಿ ನಿಯಮಗಳನ್ನು ಅಳವಡಿಸಲಾಗಿದ್ದು, ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 10 ವಿಭಾಗಗಳಲ್ಲಿ ಕಟಾ, ಕುಮಿಟೆ ಸ್ಪರ್ಧೆಗಳು ನಡೆಯುತ್ತಿದೆ. ಅಂತಿಮವಾಗಿ ಗುಂಪು ಕಟಾ, ಆಯುಧ ಕಟಾ ಹಾಗೂ ಗ್ರ್ಯಾಂಡ್ ಚಾಂಪಿಯನ್ ಶಿಪ್ ಕೂಡಾ ನಡೆಯಲಿದ್ದು, ಈ ಸ್ಪರ್ಧಾ ಕೂಟಕ್ಕೆ ರಾಜ್ಯದಿಂದ 100ಕ್ಕೂ ಅಧಿಕ ನುರಿತ ತೀರ್ಪುಗಾರರು ಆಗಮಿಸಿ ತಮ್ಮ ಕರ್ತವ್ಯವನ್ನು ನಿರ್ವಾಹಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಕನ್ನಡ ಗಾನಕೋಗಿಲೆ ಖ್ಯಾತಿಯ ಮಾ|ಲಿಖಿತ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಮ ಪಾಲನ್ ಹಾಗೂ ಶಿಕ್ಷಣ ಇಲಾಖೆ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು. ಕುಬುಡೋ ಬುಡೋಕಾನ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಶಿಹಾನ್ ರವಿ ಕುಮಾರ್ ಉದ್ಯಾವರ್ ಇವರ ತಂಡ ಈ ಕ್ರೀಡಾಕೂಟವನ್ನು ಆಯೋಜಿಸಿದೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply