Header Ads
Header Ads
Breaking News

ಉದ್ಯಾವರ : ಟ್ರನಿಟ್ ಐ.ಟಿ.ಐ.ನಲ್ಲಿ ಕೈಗಾರಿಕಾ ಪ್ರೋಜೆಕ್ಟ್‌ಗಳ ಪ್ರದರ್ಶನ

ಉದ್ಯಾವರದ ಟ್ರಿನಿಟ್ ಕೈಗಾರಿಕಾ ತರಭೇತಿ ಸಂಸ್ಥೆಯ ಮೂರನೇ ವರ್ಷದ ತಾಂತ್ರಿಕಾ ಪ್ರೋಜೆಕ್ಟ್‌ಗಳ ಪ್ರದರ್ಶನ ನಡೆದಿದ್ದು, ಉಡುಪಿ ಜಿಲ್ಲೆಯ ಕೈಗಾರಿಕಾ ತರಭೇತಿ ಸಂಸ್ಥೆಗಳ ಶ್ರೀಯಾಂಕದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ ಮಾತೃ ಸಂಸ್ಥೆಯ ತರಭೇತುದಾರರೇ ತಯಾರಿಸಿದ ತಾಂತ್ರಿಕ ಪ್ರೋಜೆಕ್ಟ್‌ಗಳ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಹಾಗೂ ಕಾರ್ಯಾಗಾರದಲ್ಲಿದ್ದ ಯಂತ್ರೋಪಕರಣಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.

ತಾಂತ್ರಿಕಾ ಪ್ರೋಜೆಕ್ಟ್‌ಗಳ ಪ್ರದರ್ಶನವನ್ನು ಮಂಗಳೂರು ಸೆಕ್ರೇಡ್ ಹಾರ್ಟ್ ಅಕಾಡೆಮಿಯ ಸಂಸ್ಥಾಪಕರಾದ ಕೆನಡಿ ಡಿಸೋಜ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಜಾನೆ 9 ಗಂಟೆಯಿಂದ ಸಂಜೆ ೪ರ ವರಗೆ ನಡೆದ ತಾಂತ್ರಿಕಾ ಪ್ರೋಜೆಕ್ಟ್‌ಗಳ ಪ್ರದರ್ಶನಕ್ಕೆ ಸುತ್ತಲ ಪರಿಸರದ ಹಲವಾರು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಂದ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸುವ ಮೂಲಕ ಈ ತಾಂತ್ರಿಕಾ ಪ್ರೋಜೆಕ್ಟ್‌ಗಳ ಪ್ರದರ್ಶನ ಮಾತೃ ಸಂಸ್ಥೆಯ ಆಡಳಿತ ಮಂಡಳಿಯ ದೂರದೃಷ್ಠಿಯ ಪ್ರತಿಫಲನವಾಗಿ ಮೂಡಿಬಂತು.

ಈ ಸಂದರ್ಭ ಉದ್ಯಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಎನ್ ಶರ್ಮ, ಸೈಂಟ್ ಪ್ರಾನ್ಸಿಸ್ ಕ್ಲೇವಿಯರ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ ತಾವ್ರೋ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *