Header Ads
Header Ads
Header Ads
Header Ads
Header Ads
Header Ads
Breaking News

ಅಪಾಯದಂಚಿನಲ್ಲಿರುವ ಉದ್ಯಾವರ ಫಸ್ಟ್ ಸಿಗ್ನಲ್ ಪರಿಸರದ 15 ಕುಟುಂಬಗಳು

ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಉದ್ಯಾವರ ಫಸ್ಟ್ ಸಿಗ್ನಲ್ ರೈಲ್ವೇ ಹಳಿ ಸಮೀಪ ವಾಸವಾಗಿರುವ ಸುಮಾರು 15 ಕುಟುಂಬಗಳು ಅಪಾಯದಂಚಿನಲ್ಲಿದೆ.ಮಳೆ ನೀರು ಮನೆಯೊಳಗೆ ನುಗ್ಗಿ ಜನರು ಸಂಕಷ್ಟವನ್ನು ಅನುಭವಿಸುವಂತಾಗಿದೆ. ಆದ್ರೂ ಸಂಬಂಧಪಟ್ಟವರು ಯಾರೂ ಈ ಕುಟುಂಬಗಳನ್ನು ಸುರಕ್ಷಿತವಾದ ಸ್ಥಳಕ್ಕೆ ವರ್ಗಾಯಿಸಲಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಈ ಪ್ರದೇಶದಲ್ಲಿರುವ ಸುಮಾರು ೧೫ ಕುಟುಂಬಗಳು ಅಪಾಯದಲ್ಲಿವೆ. ಈ ಕುಟುಂಗಳಿಗೆ ಅತ್ಯವಷ್ಯಕ ವಸ್ತುಗಳ ಖರೀದಿಗಾಗಿ ಅಥವಾ ಇನ್ನಿತರ ಆವಶ್ಯಕ್ಕಾಗಿ ಹೊರ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಾತ್ರವಲ್ಲದೆ ಜ್ವರ ಬರುತ್ತಿರುವ ಮಗುವನ್ನು ಆಸ್ಪತ್ರೆಗೂ ಸಾಗಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಆದಷ್ಟು ಬೇಗನೆ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಕುಟುಂಬಗಳು ಆಗ್ರಹಿಸಿವೆ. ಈ ಬಗ್ಗೆ ವಾರ್ಡ್ ಸದಸ್ಯ ಮುಕ್ತಾರ್‌ರವರನ್ನು ಸಂಪರ್ಕಿಸಿದಾಗ ಇದೀಗ ನೀರು ಕಟ್ಟಿ ನಿಂತಿರುವ ಸ್ಥಳ ರೈಲ್ವೇ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಆದರೂ ಪಂ. ನ ವತಿಯಿಂದ ನೀರು ಹರಿದು ಹೋಗಲು ಪೈಪನ್ನು ಅಳವಡಿಸಲಾಗಿದೆ. ಈ ಸಲ ಅಧಿಕವಾಗಿ ಸುರಿದ ಮಳೆಯಿಂದಾಗಿ ಅಲ್ಪ ತೊಂದರೆ ಜಾಸ್ತಿ ಉದ್ಬವಿಸಿದೆ. ರೈಲ್ವೇ ಇಲಾಖೆಗೆ ಮನವಿ ನೀಡಲಾಗಿರುವುದಾಗಿಯೂ ಹಾಗೂ ಈ ಬಗ್ಗೆ ವಿಶೇಷ ಗಮನವಿರಿಸಿರುವುದಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ. ಮಳೆ ಇಂದು ಕೂಡಾ ಅಧಿಕಾವಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ವಿದ್ಯಾಭ್ಯಾಸ ಕೇಂದ್ರಗಳಿಗೂ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

Related posts

Leave a Reply

Your email address will not be published. Required fields are marked *