Header Ads
Breaking News

ಉದ್ಯಾವರ  ಬಿಎಸ್ ನಗರದಲ್ಲಿ ಅಪಾಯದಂಚಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಮುಕ್ತಿ : ಇದು ವಿ4 ನ್ಯೂಸ್ ವರದಿ ಇಂಪ್ಯಾಕ್ಟ್

ಮಂಜೇಶ್ವರ:  ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ 20 ನೇ ವಾರ್ಡಿನ ಬಿ ಎಸ್ ನಗರದಲ್ಲಿ ಮರದ ವಿದ್ಯುತ್ ಕಂಬವೊಂದು ಗೆದ್ದಲು ಹಿಡಿದು ಅಪಾಯದಂಚಿನದಲ್ಲಿದ್ದು, ಬಳಿಕ ವರ್ಷಕ್ಕೆ ಮೊದಲು ತೆಂಗಿನ ಮರವೊಂದಕ್ಕೆ ಸ್ಟೇ ತಂತಿಯನ್ನು ಹಾಕಿದ್ದು ಕೂಡಾ ಮುರಿದು ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕೊನೆಗೂ ಮೋಕ್ಷ ದೊರಕಿದೆ.ಈ ಬಗ್ಗೆ v4ನ್ಯೂಸ್  ಚ್ಯಾನೆಲ್ ಎರಡು ದಿವಸಕ್ಕೆ ಮುಂಚಿತವಾಗಿ ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತು. ಈ ವರದಿಯನ್ನು ಗೌರವವಾಗಿ ತೆಗೆದು ಕೊಂಡ ಮಂಜೇಶ್ವರ ಗ್ರಾಹಕರ ವೇದಿಕೆ ಪದಾಧಿಕಾರಿಗಳು ಈ ನ್ಯೂಸ್ ನ ಕ್ಲಿಪ್ಪನ್ನು ವಿದ್ಯುತ್ ಮೇಲಾಧಿಕಾರಿಗಳಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ನೇರವಾಗಿ  ಹರಿಯಲು ಬಿಟ್ಟು ಅಧಿಕಾರಿಗಳ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಇದರಂತೆ ಶುಕ್ರವಾರ ಸಂಜೆ ವೇಳೆ ಅಧಿಕಾರಿಗಳು ಗುತ್ತಿಗೆದಾರನೊಂದಿಗೆ ಆಗಮಿಸಿ ಮರದ ಕಂಬವನ್ನು ತೆರವು ಗೊಳಿಸಿ ನೂತನವಾದ ಕಾಂಕ್ರೀಟ್ ಕಂಬವನ್ನು ಸ್ಥಾಪಿಸಿದ್ದಾರೆ.

ಸ್ಥಳೀಯರ ಹೇಳಿಕೆಯನ್ನು ಆಧರಿಸಿ ಅಪಾಯ ಸಂಭವಿಸುವುದಕ್ಕಿಂತ ಮೊದಲು ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳೀಯರು ಅದೆಷ್ಟೋ ಸಲ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಸಿಸ್ಟಂಟ್ ಇಂಜಿನಿಯರನ್ನು ಬೇಡಿ ಕೊಂಡರೂ ಯಾವುದೇ ಪ್ರತಿಕ್ರಿಯೆ ಇಲ್ಲವೆಂಬುದಾಗಿ ವರದಿಯಲ್ಲಿ ಪ್ರಸಾರಗೊಂಡಿತ್ತು.ಮಂಜೇಶ್ವರ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯವರ ಅನಾಸ್ಥೆಯಿಂದ ಹಲವು ಭಾಗಗಳಲ್ಲಿ ದುರಂತಗಳು ಸಂಭವಿಸುತಿದ್ದರೂ ಅದಕ್ಕಿಂತ ಮೊದಲು ಸ್ಥಳೀಯರು ಅಪಾಯವನ್ನು ಆಹ್ವಾನಿಸುವ ವಿದ್ಯುತ್ ಸಂಬಂಧಿತ ದೂರುಗಳನ್ನು ಸೆಕ್ಷನ್ ಕಚೇರಿಗೆ ನೀಡುತಿದ್ದರೂ ಇದಕ್ಕೆ ಮುತುವರ್ಜಿ ತೆಗೆದು ದುರಂತವನ್ನು ತಪ್ಪಿಸಲು ಬೇಕಾದ ಕ್ರಮವನ್ನು ಅನುಸರಿಸುವ ಬದಲು ದೂರು ನೀಡಿದವರಲ್ಲಿಯೇ ನಿರ್ಲ್ಯಕ್ಷದ ಅಸಂಬಂಧವಾದ ಉತ್ತರಗಳನ್ನು ನೀಡುತ್ತಿರುವ ಮಂಜೇಶ್ವರ ಸೆಕ್ಷನ್ ಅಸಿಸ್ಟಂಟ್ ಇಂಜಿಯರಿನ ವಿರುದ್ದ ನಾಗರಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ಹಾಗೂ  ಈ ದಾರಿಯಾಗಿ ದಿನನಿತ್ಯ ಮದ್ರಸ ಹಾಗೂ ಶಾಲೆಗಳಿಗೆ ಹಲವಾರು ವಿದ್ಯಾರ್ಥಿಗಳು ತೆರಳುತಿದ್ದು, ಮಾತ್ರವಲ್ಲದೆ ಈ ಪರಿಸರದಲ್ಲಿ ಸುಮಾರು 20ಕ್ಕಿಂತಲೂ ಮಿಕ್ಕ ಕುಟುಂಬಗಳು ವಾಸವಾಗಿರುವುದಾಗಿಯೂ ಅಪಾಯದ ಕಂಬವನ್ನು ತೆರವುಗೊಳಿಸಿ ಶೀಘ್ರವೇ ಹೊಸ ಕಂಬವನ್ನು ಸ್ಥಾಪಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ  ಮಹಿಳೆಯರು ಮಕ್ಕಳು ಸಮೇತ ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವೆಂಬುದಾಗಿ ಸುದ್ದಿಯಲ್ಲಿ ಪ್ರಸಾರ ಮಾಡಲಾಗಿತ್ತು.ಈ ಸುದ್ದಿಯು ಅಧಿಕಾರಿಗಳನ್ನು ಗಾಢ ನಿದ್ರೆಯಿಂದ ಎಚ್ಚೆತ್ತೆಬ್ಬಿಸಿದೆ.

Related posts

Leave a Reply