Header Ads
Header Ads
Breaking News

ಉದ್ಯಾವರ ರಾ.ಹೆದ್ದಾರಿಯಲ್ಲಿ ಕಟ್ಟಿ ನಿಲ್ಲುತ್ತಿರುವ ಮಳೆ ನೀರು ದೂರು ನೀಡಿದ್ರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು ವಿದ್ಯಾರ್ಥಿಗಳು ಸಹಿತ ಸ್ಥಳೀಯರು ಭೀತಿಯಲ್ಲಿ

 

ಉದ್ಯಾವರ ಸಂಧ್ಯಾ ಗ್ಯಾರೇಜ್ ರಾ. ಹೆದ್ದಾರಿಯಲ್ಲಿ ಮಳೆ ನೀರು ಕಟ್ಟಿ ನಿಲ್ಲುವ ಬಗ್ಗೆ ಮಾಧ್ಯಮಗಳು ಹಲವು ಸಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸುದ್ದಿ ಪ್ರಕಟಿಸುವ ಮೂಲಕ ಎಚ್ಚರಿಕೆಯ ಕರೆಗಂಟೆಯನ್ನು ನೀಡಿದರೂ ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ದ ನಾಗರಿಕ ವಲಯದಿಂದ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದೆ.
ಇದೀಗ ವಿದ್ಯಾರ್ಥಿಗಳ ಸಹಿತ ಕಾಲ್ನಡಿಗೆ ಯಾತ್ರಿಕರು ರಸ್ತೆ ಮಧ್ಯದಲ್ಲಿಯೇ ಸಂಚರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದು ಭಾರೀ ಒಂದು ದುರಂತಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ರಸ್ತೆಯಲ್ಲಿ ಮರಣಗುಮ್ಡಿಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನೀರಿನಿಂದ ಆವೃತವಾಗಿ ಕೊಳದಂತಾಗುವ ರಸ್ತೆಯಲ್ಲಿ ವಾಹನಗಳು ಕೂಡಾ ಅಪಘಾತಕ್ಕೀಡಾಗುವುದು ನಿತ್ಯ ದೃಶ್ಯವಾಗಿದೆ. ರಾ. ಹೆದ್ದಾರಿಯ ಪಕ್ಕದಲ್ಲಿರುವ ಚರಮ್ಡಿಗಳಲ್ಲಿ ತ್ಯಾಜ್ಯ ಹಾಗು ಮಣ್ಣುಗಳು ತುಂಬಿರುವುದನ್ನು ತೆರವುಗೊಳಿಸಿದರೆ ಇ‌ಅದಕ್ಕೊಂದು ಪರಿಹಾರವನ್ನು ಕಾಣಬಹುದಾಗಿದೆ. ಆದರೆ ಇದಕ್ಕೆ ಸ್ಪಂಧಿಸಬೇಕಾದ ಲೋಕೋಪಯೋಗಿ ಇಲಾಖೆ, ಪಂಚಾಯತು ಹಾಗೂ ಜನಪ್ರತಿನಿಧಿಗಳು ಗಾಢ ನಿದ್ರೆಗೆ ಜಾರಿರುವುದು ಸ್ಥಳೀಯರನ್ನು ನಿದ್ದೆಗೆಡಿಸಿದೆ. ಇದರ ಸಮೀಪವಿರುವ ಮನೆ ಅಂಗಣದಲ್ಲೂ ನೀರು ಧಾರಾಕಾರವಾಗಿ ಕಟ್ಟಿ ನಿಲ್ಲುತ್ತಿರುವುದರಿಂದ ಇವರಿಗೂ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply