Header Ads
Header Ads
Header Ads
Breaking News

ಉದ್ಯೋಗಾಂಕ್ಷಿಗಳ ಪಾಲಿಗೆ ವರವಾದ ಉದ್ಯೋಗ ಸಿರಿ ನೂರಾರು ಮಂದಿ ಉದ್ಯೋಗಾಂಕ್ಷಿಗಳು ಭಾಗಿ ಆಳ್ವಾಸ್‌ನ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಉದ್ಯೋಗ ಸಿರಿ

ನುಡಿಸಿರಿಯ ಈ ಬಾರಿಯ ವಿಶೇಷ ಕಾರ್ಯಕ್ರಮಗಳಲ್ಲಿ ಉದ್ಯೋಗ ರಿಯೂ ಒಂದು. ನೂರಾರು ಮಂದಿ ಉದ್ಯೋಗಾಂಕ್ಷಿಗಳು ವಿದ್ಯಾಗಿರಿ ಕ್ಯಾಂಪಸ್‌ಗೆ ಧಾವಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀದರ್ ಹಾಲಪ್ಪ ಉದ್ಘಾಟಿಸಿ, ಮಾತನಾಡಿದರು. ಉದ್ಯೋಗ ಎಂಬುದು ಒಂದು ವಿನೂತನ ಮೈಲಿಗಲ್ಲು, ಒಂದು ತಾಯಿ ನೀಡುವ ಪ್ರೀತಿ ಮಮತೆಯನ್ನು ಯುವ ಪೀಳಿಗೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡುತ್ತಿದೆ ಅಂತಾ ಹೇಳಿದರು.


ಇನ್ನೂ ಅಧ್ಯಕ್ಷತೆ ವಹಿಸಿದ್ದ ಡ| ಮೋಹನ್ ಆಳ್ವ ಮಾತನಾಡಿ, ತುಳುನಾಡು ಹಲುವಾರು ಮಂದಿಗೆ ಹಲವು ರೀತಿ ಮತ್ತು ವಿಷಯಗಳಲ್ಲಿ ತ್ಯಾಗ ಮಾಡಿದೆ. ತಾಯಿ ನಾಡು ಮಾಡಿದ ತ್ಯಾಗಕ್ಕೆ ಯಾವ ರೀತಿ ನಾವು ಬದ್ಧರಾಗಿರುತ್ತೇವೆ ಎಂಬುದು ಮುಖ್ಯವಾಗುತ್ತದೆ ಅಂತಾ ಹೇಳಿದರು.

ಈ ವೇಳೆ ಆಳ್ವಾಸ್ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ|ಕುರಿಯನ್ , ಕನ್ನಡ ಉಪನ್ಯಾಸಕ ಉದಯ ಮಂಜುನಾಥ ಮತ್ತಿತರು ಉಪಸ್ಥತರಿದ್ರು.

Related posts

Leave a Reply