Header Ads
Breaking News

ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಶಿಕ್ಷಣದ ಪಾತ್ರ ಗಣನೀಯ : ಡಾ. ಬಿ. ಯಶೋವರ್ಮ

ಶಿಕ್ಷಣ ಕ್ಷೇತ್ರವೂ ಉದ್ಯೋಗ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ವೃತ್ತಿಪರ ತರಬೇತಿಯನ್ನು ಓದುವ ಕಾಲಕ್ಕೆ ವಿದ್ಯಾರ್ಥಿಗಳಿಗೆ ನೀಡುತ್ತಿವೆ ಎಂದು ಎಸ್.ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗವು ಸೋಮವಾರ ’ಡಾಟ ಸೈನ್ಸ್ ಅಂಡ್ ಮಶಿನ್ ಲರ್ನಿಂಗ್ ಬೂಟ್‌ಕ್ಯಾಂಪ್ ವಿಥ್ ಪೈಥಾನ್’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ಅನಕ್ಷರಸ್ಥ ತಿಂಗಳಿಗೆ ಹತ್ತು ಸಾವಿರ ಆದಾಯ ಗಳಿಸಿದರೆ, ಅಕ್ಷರಸ್ಥ ತಿಂಗಳಿಗೆ ಮೂವತ್ತು ಸಾವಿರ ಗಳಿಸುತ್ತಾನೆ. ಇದು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಈ ಬಗೆಯ ವ್ಯಕ್ತಿಗತ ಪ್ರಯೋಜನ ತಂದುಕೊಡುವ ನಿಟ್ಟಿನಲ್ಲಿ ಆರ್ಥಿಕ ವ್ಯವಸ್ಥೆ ರೂಪುಗೊಂಡಾಗ ಅಭಿವೃದ್ಧಿಯ ಸಾಧ್ಯತೆಗಳು ವಿಸ್ತಾರಗೊಳ್ಳುತ್ತವೆ ಎಂದರು.

ಹಾಗೆಯೆ ಪ್ರತಿಯೊಂದಕ್ಕೂ ಅವಲಂಬಿಸುವ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಸ್ವ ಇಚ್ಛೆಯಿಂದ, ಸ್ವ ಪ್ರಯತ್ನದಿಂದ ಕಲಿತರೆ ಉಜ್ವಲ ಭವಿ? ಲಭಿಸುತ್ತದೆ. ಆರ್ ಬಿ ಐ ನಲ್ಲಿ ಎಲ್ಲಾ ಕಾರ್ಯಗಳನ್ನು ಮೆಶಿನ್ ಮೂಲಕ ಮಾಡಲಾಗುತ್ತದೆ. ಆದರೆ ಆದೇ ಮೆಶಿನ್‌ಗಳನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿಯುವುದು ಮುಖ್ಯವಾಗಿದೆ. ಅಂತಹ ವಿ?ಯಗಳಲ್ಲಿ ವ್ಯವಹಾರ ಶಾಸ್ತ್ರ ಕಲಿತ ವಿದ್ಯಾರ್ಥಿಗಳು ಬಹುಮುಖ್ಯ ಪಾತ್ರವಹಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಉಜಿರೆ ಎಸ್.ಡಿ.ಎಂ ಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ತ್ಯಾಗರಾಜು ಜಿ.ಎಸ್, ಕಾಲೇಜಿನ ಪ್ರಾಂಶುಪಾಲ ಡಾ. ಎಸ್ ಸತೀಶ್ಚಂದ್ರ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಬಿ ಗಣಪಯ್ಯ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಶಾಂತಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ರಾವ್ ವಂದಿಸಿದರು.

ವರದಿ: ಶ್ವೇತಾ ಮುಂಡ್ರುಪ್ಪಾಡಿ
ಚಿತ್ರ: ಅಖಿಲೇಶ್

Related posts

Leave a Reply

Your email address will not be published. Required fields are marked *