Header Ads
Header Ads
Header Ads
Breaking News

ಉದ್ಯೋಗ ಕೊಡಿಸುವ ಬಗ್ಗೆ ನಂಬಿಸಿ ಮೋಸ: 14ತಿಂಗಳ ಬಳಿಕ ಭಾರತಕ್ಕೆ ಮರಳಿದ ಜೆಸಿಂತಾ

ಈಕೆಯ ಪತಿ ತೀರಿ ಹೋಗಿದ್ದರು. ತನ್ನ ಮೂವರು ಮಕ್ಕಳ ಶಿಕ್ಷಣ, ಪೋಷಣೆಯ ಜವಾಬ್ಧಾರಿ ಇವರ ಮೇಲಿತ್ತು. ಇದಕ್ಕಾಗಿ ವಿದೇಶಕ್ಕೆ ಹೋಗಿ ಕೆಲಸ ಮಾಡಲು ನಿರ್ದರಿಸಿದರು..ವಿದೇಶಕ್ಕೂ ಹೋದ್ರು.. ಆದ್ರೆ ಈ ನಡುವೆ ಅವರಿಗೇ ಗೊತ್ತಿಲ್ಲದೇ ಮಾನವ ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿ ಒದ್ದಾಡಿದ್ರು…ಇದೀಗ ಭಾರತಕ್ಕೆ ವಾಪಾಸಾಗಿದ್ದಾರೆ ಈ ಮಹಿಳೆ..ಇವರು ಪಟ್ಟ ಪಾಡೇನು…ಇಲ್ಲಿದೆ ನೋಡಿ ಡೀಟೇಲ್ಸ್..

ಸ್ವಲ್ಪ ಯಾಮಾರಿದ್ರೆ ಸಾಕು..ವಿದೇಶ ಕೆಲಸ ಕೂಡಾ ಯಮಯಾತನೆ ಆಗುತ್ತೆ ಅಂತ ಇವ್ರೇ ನಿಜವಾದ ಉದಾರಣೆ.ಯಸ್..ಇವರು ಉಡುಪಿಜಿಲ್ಲೆಯ ಕಾರ್ಕಳ ತಾಲೂಕಿನ ಜೆಸಿಂತಾ.. ಕಳೆದ ವರ್ಷ ಇವರ ಪತಿ ಅಸೌಖ್ಯದಿಂದ ನಿಧನಹೊಂದಿದ್ದರು. ಮೊವರು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಹಾಗೂ ಪೋಷಣೆಯ ಜವಾಬ್ಧಾರಿ ಜೆಸಿಂತಾ ಮೇಲೆ ಬಿತ್ತು. ವಿದೇಶದಲ್ಲಿ ಉದ್ಯೋಗ ಮಾಡಿದರೆ ಹಣ ಜಾಸ್ತಿ ಸಿಗುತ್ತೆ.. ಮಕ್ಕಳನ್ನು ಚೆನ್ನಾಗಿ ಓದಿಸಬಹುದೆಂಬುದು ಅವರ ಇರಾದೆಯಾಗಿತ್ತು. ಇದಕ್ಕಾಗಿ ಹಲವಾರು ಪ್ರಯತ್ನಪಟ್ಟರು. ಈ ನಡುವೆ ಕತಾರ್ ನಲ್ಲಿ ಕೆಲಸ ಕೊಡಿಸುವುದಾಗಿ ಮಂಗಳೂರಿನ ಜೇಮ್ಸ್ ಎನ್ನುವ ವ್ಯಕ್ತಿ ಜೆಸಿಂತಾ ಅವರನ್ನು ನಂಬಿಸಿದ. ಮಾತ್ರ ಅಲ್ಲ ಪಾಸ್ ಪೋರ್ಟ್ ಕೂಡಾ ಮಾಡಿಸಿದ. ಜೂನ್ 19ರಂದು ಜೆಸಿಂತಾ ಮುಂಬಯಿ ವಿಮಾನ ಹತ್ತಿದರು. ಆದ್ರೆ ತಾನು ಹೋಗಬೇಕಿದ್ದ ಕತಾರ್ ಬದಲು ಸೌದಿ ಅರೇಬಿಯಾಕ್ಕೆ ಬಂದಿದ್ದರು. ಅಲ್ಲೇ ಮೊಸ ಹೋಗಿರುವ ಬಗ್ಗೆ ಅರಿವಾಯಿತು.ಮಂಗಳೂರಿನ ಜೇಮ್ಸ್ ಸೌದಿ ಅರೇಬಿಯಾದ ಉದ್ಯಮಿ ಅಲ್ಮುತ್ಯಾರಿಗೆ ಜೆಸಿಂತಾ ಅವರನ್ನು ಎರಡು ವರ್ಷದ ಮನೆ ಕೆಲಸಕ್ಕೆ 5 ಲಕ್ಷಕ್ಕೆ ಮಾರಿದ್ದ . ಜೆಸಿಂತಾ ೧೪ತಿಂಗಳು ಉದ್ಯಮಿಯ ಮನೆಯಲ್ಲಿ ಮಾನಸಿಕ, ದೈಹಿಕ ಹಿಂಸೆ ಅನುಭವಿಸುವಂತಾಯಿತು.

ಜೆಸಿಂತಾ ವಿದೇಶದಲ್ಲಿ ತೊಂದರೆಯಲ್ಲಿ ಸುಲುಕಿರುವ ಬಗ್ಗೆ ಸುಳಿವು ಸಿಕ್ಕಿ ಈ ಬಗ್ಗೆ ಮಂಗಳೂರು ಕಮಿಷನರ್ ಹಾಗೂ ಠಾಣೆಯಲ್ಲಿ ದೂರು ನಿಡಲಾಯಿತು. ಪೊಲಿಸರು ಜೇಮ್ಸ್ ನನ್ನು ಬಂಧಿಸಿದರು.ಆದ್ರೆ ಜೆಸಿಂತಾವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಈ ಸಂದರ್ಬದಲ್ಲಿ ಕುಟುಂಬ ಉಡುಪಿಯ ಮಾನವ ಹಕ್ಕು ರಕ್ಷಣಾ ಪ್ರತಿಷ್ತಾನದ ಮೊರೆ ಹೋಯಿತು. ಇದರ ಅದ್ಯಕ್ಷರಾದ ರವೀಂದ್ರನಾಥ ಶ್ಯಾನುಭೋಗ್ ಜೆಸಿಂತಾ ಕರೆ ತರಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಸೌದಿ ಉದ್ಯಮಿ ಅಲ್ಮುತ್ಯಾರಿಯನ್ನು ಸಂಪರ್ಕಿಸಿ ಜೆಸಿಂತಾ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಆದ್ರೆ ಅಲ್ಮುತ್ಯಾರಿ ಒಪ್ಪಲಿಲ್ಲ. ನನ್ನ ೫ಲಕ್ಷ ಹಣವನ್ನು ಕೊಡುವಂತೆ ಹೇಳಿದ. ಈ ಹಿನ್ನಲೆಯಲ್ಲಿ ರವೀಂದ್ರ ನಾಥರು ಗಲ್ಫ್ ನಲ್ಲಿರುವ ಕನ್ನಡಿಗರನ್ನು ನೆರವಿಗೆ ಬರುವಂತೆ ಕೋರಿಕೊಂಡರು. ಮಂಗಳೂರಿನ ಎನ್.ಆರ್.ಐ ಫೋರಂ ಸ್ಥಾಪಕ ಬಿ.ಕೆ.ಶೆಟ್ಟಿ ಹಾಗೂ ಅದ್ಯಕ್ಷ ರೋಶನ್ ರೋಡ್ರಿಗಸ್ ಹಲವು ದಾನಿಗಳಿಂದ ೫ಲಕ್ಷ ಹಣವನ್ನು ಸಂಗ್ರಹಿಸಿ ಉದ್ಯಮಿ ಅಲ್ಮುತಾರಿಗೆ ನಿಡಿದ್ರು. ಇದರಿಂದ ಸೆ.೧೬ರಂದು ಜೆಸಿಂತಾ ಅವರನ್ನು ಅಲ್ಮುತ್ಯಾರಿ ಬಿಡುಗಡೆಗೊಳಿಸಿದ.

ಜೆಸಿಂತಾ ಬಿಡುಗಡೆ ಆದ್ರೂ ಕೂಡಾ ಭಾರತಕ್ಕೆ ಬರುವಂತಿರಲಿಲ್ಲ. ಆಕೆಯನ್ನು ಮಾನವ ಕಳ್ಳಸಾಕಣಿಕೆ ಜಾಲದವರು ಖರೀದಿಸಿದ್ದರಿಂದ ವರ್ಕ್ ಪರ್ಮೀಟ್ ಮಾಡದೇ ಕೆಲಸಕ್ಕೆ ಇಟ್ಟುಕೊಂಡಿದ್ದರು. ಸೌದಿಯಲ್ಲಿ ಯಾವುದೇ ಆಧಾರ ರಹಿತ ವಾಗಿ ನೆಲೆಸಿದ್ದರಿಂದ ಯಾವುದೇ ಸಮಯದಲ್ಲಿ ಬಂಧಿಸಿ ಶಾಶ್ವತವಾಗಿ ಜೈಲಿಗಟ್ಟುವ ಸಾಧ್ಯತೆ ಇತ್ತು. ಈ ಹಿನ್ನಲೆಯಲ್ಲಿ ರೋಶನ್ ಮತ್ತವರ ತಂಡ ಕಾರ್ಮಿಕ ಇಲಾಖೆಯನ್ನು ಸತತವಾಗಿ ಸಂಪರ್ಕಿಸಿ ವರ್ಕ್ ಪರ್ಮಿಟ್ ಪಡೆಯುವಲ್ಲಿ ಯಶಸ್ವಿಯಾದವರು. ಜೆಸಿಂತಾ ಈ ಮೂಲಕ ಸೇಫ್ ಆಗಿ ಭಾರತಕ್ಕೆ ಬರುವಂತಾಯಿತು.

Related posts

Leave a Reply