Header Ads
Breaking News

ಉದ್ಯೋಗ ನಿಮಿತ್ತ ಪುತ್ತೂರಿಗೆ ಬಂದ ಯುವತಿ ನಾಪತ್ತೆ : ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರಿನ ಕಚೇರಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಯುವತಿಯೊಬ್ಬಳು ವಾಪಸ್ಸು ಮನೆಗೆ ತೆರಳದೆ ಕಾಣೆಯಾಗಿದ್ದಾಳೆ ಎಂದು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕು. ಪುಣ್ಚಪಾಡಿ ಗ್ರಾಮದ ನಡುಮನೆ ನಿವಾಸಿ ಚಂದ್ರಹಾಸ ರೈ ರವರ ಮಗಳು ಮನೀಶಾ ರೈ (22 ) ಕಾಣೆಯಾದ ಯುವತಿ. ಪುತ್ತೂರಿನ ಕಲ್ಲಾರೆ ಎಂಬಲ್ಲಿರುವ ಕ್ವಾಲಿಟಿ ಪಾಮ್ಸ್ ನವರ ಅಫೀಸ್ ನಲ್ಲಿ ಉದ್ಯೋಗಿ ಯಾಗಿರುವ ಈಕೆ ಅ 8 ರಂದು ಪುಣ್ಚಪಾಡಿಯ ತನ್ನ ಮನೆಯಿಂದ ಕೆಲಸಕ್ಕೆಂದು ಬಂದಿದ್ದಳು .ಸಂಜೆ 5.30 ರವರೆಗೂ ಅಲ್ಲಿ ಕೆಲಸ ಮಾಡಿ ವಾಪಸ್ಸು ಮನೆಗೆ ಹೋಗದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಚಂದ್ರಹಾಸ ರೈಯವರು ತನ್ನ ದೂರಿನಲ್ಲಿ ತಿಳಿಸಿದ್ದಾರೆ 

ಕಾಣೆಯಾದ ಯುವತಿ ಪತ್ತೆಯಾದಲ್ಲಿ ಪುತ್ತೂರು ಮಹಿಳಾ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ಮನವಿ ಮಾಡಿದ್ದಾರೆ. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 08251- 233500.

Related posts

Leave a Reply

Your email address will not be published. Required fields are marked *